ಪಲ್ಲಿಪಾಡಿ-ಕಂಡದಬೆಟ್ಟು- ಸಾಣೂರು ರಸ್ತೆ ಅಭಿವೃದ್ಧಿಗೆ ಸಚಿವ ರೈ ಶಿಲಾನ್ಯಾಸ
ಬಂಟ್ವಾಳ, ಜೂ. 3: ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4 ಗಾಂಧಿಪಥ-ಗ್ರಾಮ ಪಥ ಯೋಜನೆಯಡಿ 2.35 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪಲ್ಲಿಪಾಡಿ-ಕಂಡದಬೆಟ್ಟು- ಸಾಣೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣದ ಮೂಲಕ ಈ ಊರಿಗೆ ಅಭಿವೃದ್ಧಿಯ ಬೆಳಕು ಮೂಡಿದೆ. ಹಲವು ವರ್ಷಗಳ ಬೇಡಿಕೆ ಈಗ ನನಸಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಯಶವಂತ ಪೂಜಾರಿ ಮಾತನಾಡಿದರು. ಬಡಗ ಬೆಳ್ಳೂರು ಪಂಚಾಯತ್ ಅಧ್ಯಕ್ಷೆ ಜಯಂತಿ, ಯೋಗೀಶ್ ಸೂರ್ಲ, ವಸಂತ, ಉಮೇಶ್ ಆಚಾರ್ಯ, ಕಿಶೋರ್, ಮೋಹನ್ ಶೆಟ್ಟಿ, ಗುತ್ತಿಗೆದಾರ ಪ್ರೇಮನಾಥ, ಜನಾರ್ದನ ಚೆಂಡ್ತಿಮಾರ್, ಸಿದ್ದೀಕ್ ಗುಡ್ಡೆಯಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಾನಂದ ಪೂಜಾರಿ ತಾಂತ್ರಿಕ ಪ್ರಸ್ತಾವನೆ ನೀಡಿದರು. ಸಕೇಶ್ ಮಾಂಡ್ರಾಡಿ ಕಾರ್ಐಕ್ರಮ ನಿರೂಪಿಸಿದರು.