ಯುನಿವೆಫ್ ನಿಂದ ರಮಝಾನ್ ಕಾರ್ಯಕ್ರಮ
Update: 2017-06-03 18:01 IST
ಮಂಗಳೂರು, ಜೂ. 3: ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಜೂ. 5 ರಿಂದ 8 ರ ತನಕ ಫಳ್ನೀರ್ ನ ಇಂದಿರಾ ಆಸ್ಪತ್ರೆ ಬಳಿ ಇರುವ ದಾರುಲ್ ಇಲ್ಮ್ ಮದ್ರಸದ ಸಭಾಂಗಣದಲ್ಲಿ ಮಧ್ಯಾಹ್ನ 1.15 ಕ್ಕೆ ರಮಝಾನ್ ಪ್ರಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ರಾಜ್ಯಾಧ್ಯಕ್ಷ ಹಾಗೂ ನಿಮ್ರಾ ಮಸೀದಿಯ ಖತೀಬ್ ರಫೀ ಉದ್ದೀನ್ ಕುದ್ರೋಳಿ ಮತಪ್ರವಚನ ನೀಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸೈದುದ್ದೀನ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.