×
Ad

ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಶಾಲೆಗೆ 100% ಫಲಿತಾಂಶ

Update: 2017-06-03 18:39 IST

ಮಂಗಳೂರು, ಜೂ.3: ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯು 2016-17 ನೇ ಶೈಕ್ಷಣಿಕ ಸಾಲಿನಲ್ಲಿ ಹತ್ತನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದಿದೆ.

ಈ ಸಾಲಿನ ಹತ್ತನೇ ತರಗತಿಯಲ್ಲಿ 36 ವಿದ್ಯಾರ್ಥಿಗಳಿದ್ದರು. ಇದು ಶಾಲೆಯ ಹತ್ತನೇ ತರಗತಿಯ ಮೂರನೇ ಬ್ಯಾಚ್ ಆಗಿರುತ್ತದೆ. ಸಂಸ್ಥೆಯ ಪ್ರಾಧ್ಯಾಪಕಿ ಫಿರೋಝಾ ಫಯಾಝ್ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಸಾಧನೆ ಮತ್ತು ಪರಿಶ್ರಮದಿಂದ ಶಾಲೆಗೂ, ಹೆತ್ತವರಿಗೂ ಕೀರ್ತಿ ತಂದಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅಭಾರಿಯಾಗಿದೆ ಎಂದು ಹೇಳಿದರು.

ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯು ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಿ, ಮಕ್ಕಳ ಸಂಪೂರ್ಣ ಶ್ರೇಯಾಭಿವೃದ್ಧಿಗೆ ಸಹಕರವನ್ನು ಒದಗಿಸುತ್ತಾ ಬಂದಿದೆ. ಕಳೆದ ಮೂರು ಶೈಕ್ಷಣಿಕ ಸಾಲಿನಲ್ಲಿ ಬಂದಿರುವ ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶ ಇದನ್ನು ಸಾಬೀತು ಪಡಿಸುತ್ತದೆ ಎಂದರು.

ಪರೀಕ್ಷೆ ಬರೆದ 36 ವಿದ್ಯಾರ್ಥಿಗಳಲ್ಲಿ 16 ಉನ್ನತ ದರ್ಜೆ ಹಾಗೂ ಉಳಿದ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ 100 ಶೇಕಡಾ ಫಲಿತಾಂಶವನ್ನು ತಂದಿದ್ದಾರೆ. ಅವರಲ್ಲಿ ನಜಿಲಾ ಹಮದ್ ಬಾವಾ, ಹಜಿರಾ ನಾಸಿರ್ ಮತ್ತು ವಿಸಾಲ್ ಮೊಹಮ್ಮದ್ ಸಯೀದ್ 10 ಸಿಜಿಪಿಎ, ಸನ ನೈಮ, ಮೀರ್ ಮುಬಾಶಿರ್ ಜಹೂರ್ ಮತ್ತು ಮುನಿಸ್ 9.8 ಸಿಜಿಪಿಎ, ರೀಮ ಫಾತೀಮ ಅಶ್ರಫ್, ಇಮಾದ್ ಇಕ್ಬಾಲ್ ಖಾನ್ ಮತ್ತು ಸನದ್ ಮೊಹಮ್ಮದ್ ಶೇಕ್ 9.6 ಸಿಜಿಪಿಎ, ಅಬ್ದುಲ್ ಹಮೀದ್ ಹಮೀಮ್ ನಸೂಹ್ ಮತ್ತು ಅಬ್ದುಲ್ ಶೀಶ್ ರವ 9.4 ಸಿಜಿಪಿಎ, ಅಬೀರ್ ಅಬ್ದುಲ್ ಅಝೀಝ್ ಕೊಪ್ಪಲ್ ಸಚಿತ್‌ರಾಮ್ ಮತ್ತು ಮರಿಯಮ್ಮ್ ಹಾಫ್ 9.2 ಮತ್ತು ಅಯಿಶಾ ತಹನಿಯಾ ಮತ್ತು ಮೊಹಮ್ಮದ್ ಅಮಾನ್ 9.0 ಸಿಜಿಪಿಎ ಅಂಕಗಳನ್ನು ಗಳಿಸಿರುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News