ನಿಟ್ಟೆ: ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ

Update: 2017-06-03 16:45 GMT

ಕಾರ್ಕಳ, ಜೂ.3: ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮ್ಮೇಳನವು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸಮ್ಮೇಳನ ಉದ್ಘಾಟಿಸಿ, ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮಾದರಿಯಾಗಿದೆ ಎನ್ನುವುದಕ್ಕೆ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳೇ ನಿದರ್ಶನ. ಸಾಕಷ್ಟು ಶೈಕ್ಷಣಿಕ ಒತ್ತಡಗಳ ನಡುವೆಯೂ ಶಿಕ್ಷಕರು ನಿಸ್ಪಹರಾಗಿ ದುಡಿಯುತ್ತಿರುವುದು ಶ್ಲಾಘನೀಯ. ಅವರ ಬದ್ಧತೆಗೆ ಶಿಕ್ಷಣ ಇಲಾಖೆ ಋಣಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಜಿಲ್ಲೆ ಉತ್ತಮ ಫಲಿತಾಂಶ ಪಡೆದಿದ್ದರೂ ಅನುತ್ತೀರ್ಣತೆಯ ಮಟ್ಟವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಉತ್ತಮ ಗುಣಮಟ್ಟ ಕಾಪಾಡಿಕೊಂಡು ಶಿಕ್ಷಕರು ರಾಷ್ಟ್ರನಿರ್ಮಾಣ ಕಾರ್ಯವನ್ನು ಉತ್ತೇಜಿಸಬೇಕು ಎಂದರು.

ಉಡುಪಿ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಜಿ.ಪಂ.ಸದಸ್ಯೆ ರೇಷ್ಮಾ ಉದಯ ಕುಮಾರ್ ಶೆಟ್ಟಿ, ದ.ಕ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮಧ್ಯಸ್ಥ ಶುಭಾಶಂಸನೆಗೈದರು.
ಇನ್ನ ಎ.ಬಿ.ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಪಿ.ಎನ್ ಹೊರತಂದಿರುವ ಇಂಗ್ಲೀಷ್ ವ್ಯಾಕರಣದ ಡಿ.ವಿ.ಡಿ.ಗಳನ್ನು ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೆ ಉಚಿತವಾಗಿ ಹಸ್ತಾಂತರಿಸಲಾಯಿತು.

ಪ.ಪೂ.ಕಾಲೇಜು ಪ್ರಾಂಶುಪಾಲೆ ಇಂದಿರಾ, ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ರಾವ್ ಪಿ.ಎನ್. ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಡಯಟ್ ಪ್ರಾಂಶುಪಾಲ ಶೇಖರ್, ಶಿಕ್ಷಣಾಧಿಕಾರಿಗಳಾದ ಮಧುಕರ್, ನಾಗರಾಜ್, ರಾಮಚಂದ್ರ ರಾಜೇ ಅರಸ್, ನಾಗರತ್ನಾ, ನಾಗೇಶ್ ಶ್ಯಾನುಭೋಗ್ ವಿವಿಧ ಶೈಕ್ಷಣಿಕ ಗೋಷ್ಠಿ ನೆರವೇರಿಸಿದರು.

ಕಾರ್ಕಳ ವಲಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಭಟ್ ಕೆ., ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ಎನ್.ಎಸ್.ಎ.ಎಂ. ಪ.ಪೂ. ಕಾಲೇಜಿನ ಮುಖ್ಯ ಶಿಕ್ಷಕ ಅರವಿಂದ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News