ಮುಡಾರು: ಸಹಾಯ ಧನ ವಿತರಣೆ
Update: 2017-06-03 22:18 IST
ಕಾರ್ಕಳ, ಜೂ. 3: ಮುಡಾರು ಗ್ರಾ.ಪಂ.ನಲ್ಲಿ ಶೇ.25 ಮತ್ತು ಶೇ. 3 ನಿಧಿಯಲ್ಲಿ ವಿಶೇಷ ಚೇತನ ಮತ್ತು ಪ. ಜಾತಿ, ಪ. ಪಂಗಡದ ಬಡ ಜನರಿಗೆ ಸಹಾಯ ಧನ ವಿತರಣೆ ನಡೆಯಿತು.
ಮುಡಾರು ಗ್ರಾ.ಪಂ.ಅಧ್ಯಕ್ಷೆ ಗೀತಾ ಎಸ್. ಪಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಜಗೋಳಿ ಜಿ.ಪಂ.ಸದಸ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ತಾ.ಪಂ.ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಪಂ. ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಡಾರು ಗ್ರಾಮದ ಬಜಗೋಳಿ ಸ.ಮಾ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಬೋರ್‌ವೆಲ್ ಜಲ ಮರುಪೂರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಂ. ಅಭಿವೃದ್ಧಿ ಅಧಿಕಾರಿ ಬೆನ್ನಿ ಕ್ವಾಡ್ರಸ್ ಸ್ವಾಗತಿಸಿ, ವಂದಿಸಿದರು.