×
Ad

ನಿಟ್ಟೆ: ಕೌಶಲ್ಯಾಭಿವೃದ್ಧಿ ಒಡಂಬಡಿಕೆಗೆ ಸಹಿ

Update: 2017-06-03 22:23 IST

ಕಾರ್ಕಳ, ಜೂ. 3: ನಿಟ್ಟೆ ತಾಂತ್ರಿಕ ವಿದ್ಯಾಲಯವು ಬೆಂಗಳೂರಿನ ಕೆ. ಎಚ್. ಡಿಸೈನ್ಸ್ (ನ್ಯಾಸ್ಕೊಮ್ ಮತ್ತು ಸಿಮೆನ್ಸ್ ಜತೆಗಾರರು) ಜೊತೆ ಕೌಶಲ್ಯಾಭಿವೃದ್ಧಿ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.

ಈ ಒಡಂಬಡಿಕೆಯಿಂದಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಿಸೈನ್ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಲಿದ್ದು, ದೇಶದಲ್ಲಿರುವ ನೂರಾರು ಡಿಸೈನ್ ಕಂಪನಿಗಳಲ್ಲಿ ತಕ್ಷಣವೇ ಕೆಲಸ ಗಿಟ್ಟಿಸಿಗೊಳ್ಳಲು ಸಹಕಾರಿಯಾಗಲಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಶಶಿಕಾಂತ ಕರಿಂಕ ಮಾತನಾಡಿ, ನಮ್ಮ ದೇಶವು ಜಗತ್ತಿನಲ್ಲೇ ಉತ್ಪಾದನಾ ಕ್ಷೇತ್ರದಲ್ಲಿ ದಿಗ್ಗಜನಾಗಿ ಮೂಡಿಬರುತ್ತಿದ್ದು, ಮುಂದಿನ ಪೀಳಿಗೆಗೆ ಸಾಕಷ್ಟು ಉದ್ಯೋಗಾವಕಾಶ ಲಭಿಸಲಿದೆ ಎಂದರು.

ಪ್ರಾಂಶುಪಾಲ ಡಾ ನಿರಂಜನ್ ಚಿಪ್ಲೂಣ್ಕರ್ ಮಾತನಾಡಿ, ನಮ್ಮ ವಿದ್ಯಾಲಯವು ಶೈಕ್ಷಣಿಕ ಸ್ವಾಯತ್ತತೆ ಪಡೆದು ಕೊಂಡಿದ್ದರಿಂದ ಇಂತಹ ಅಗತ್ಯತೆಗಳನ್ನು ಪಠ್ಯಕ್ರಮದಲ್ಲಿಯೇ ಅಳವಡಿಸಿ, ವಿದ್ಯಾರ್ಥಿಗಳನ್ನು ಕಂಪೆನಿಗಳಿಗೆ ಅವರ ಅಗತ್ಯಗಳ ಅನುಸಾರವಾಗಿ ಸಂಪೂರ್ಣ ಇಂಜಿನಿಯರ್‌ಗಳನ್ನಾಗಿ ಮಾರ್ಪಡಿಸಲಾಗುವುದು. ಇದರಿಂದ ಕಂಪೆನಿಗಳಿಗೆ ತರಬೇತಿಯ ಖರ್ಚು ಹಾಗೂ ಸಮಯದ ಉಳಿತಾಯಗೊಳಿಸಲಾಗುವುದು ಎಂದರು.
 

ಕೆ. ಎಚ್. ಡಿಸೈನ್ಸ್ ನಿರ್ದೇಶಕ ಕಿರಣ್ ಹೆಬ್ಬಾರ್ ಮಾತನಾಡಿ, ಪ್ರಸ್ತುತ ಒಂದು ಲಕ್ಷ ಮೆಕ್ಯಾನಿಕಲ್ ಡಿಸೈನ್ ಇಂಜಿನಿ ಯರ್‌ಗಳು ಸುಮಾರು 400 ಕ್ಕಿಂತ ಹೆಚ್ಚಿನ ಕಂಪೆನಿಗಳಲ್ಲಿ ದುಡಿಯುತ್ತಿದ್ದು 2022ರ ಸುಮಾರಿಗೆ ಈ ಸಂಖ್ಯೆ ಮೂರು ಲಕ್ಷಗಳಿಗೇರಲಿದೆ. ಅದಕ್ಕೆ ಪೂರಕವಾಗಿ ನಮ್ಮ ತರಬೇತಿಯು ಭವಿಷ್ಯದ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್‌ಗಳನ್ನು ಉತ್ಪಾದಿಸಲಿದೆ ಎಂದರು.

ಪ್ರಸ್ತುತ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 50 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಮುಂದಿನ ವರ್ಷ 100 ವಿದ್ಯಾರ್ಥಿಗಳಿಗೆ ಕ್ಯಾಡ್, ಪ್ರಾಡಕ್ಟ್ ಡೆವಲಪ್‌ಮೆಂಟ್, ಪ್ಲಾಸ್ಟಿಕ್ ಪಾರ್ಟ್ಸ್ ಡಿಸೈನ್, ಶೀಟ್ ಮೆಟಲ್ ಹಾಗೂ ಡೈ ಕಾಸ್ಟಿಂಗ್ ಉತ್ಪಾದನಾ ಕೌಶಲ್ಯಗಳಲ್ಲಿ ತರಬೇತಿಗೊಳಿಸುವ ಗುರಿಯನ್ನು ನಿಟ್ಟೆ ಇಂಜಿನಿಯರಿಂಗ್ ಸಂಸ್ಥೆ ಹೊಂದಿದೆ. ತರಬೇತಿಯು ಭವಿಷ್ಯದ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್‌ಗಳನ್ನು ಉತ್ಪಾದಿಸಲಿದೆ ಎಂದರು.

ಪ್ರಸ್ತುತ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 50 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಮುಂದಿನ ವರ್ಷ 100 ವಿದ್ಯಾರ್ಥಿಗಳಿಗೆ ಕ್ಯಾಡ್, ಪ್ರಾಡಕ್ಟ್ ಡೆವಲಪ್‌ಮೆಂಟ್, ಪ್ಲಾಸ್ಟಿಕ್ ಪಾರ್ಟ್ಸ್ ಡಿಸೈನ್, ಶೀಟ್ ಮೆಟಲ್ ಹಾಗೂ ಡೈ ಕಾಸ್ಟಿಂಗ್ ಉತ್ಪಾದನಾ ಕೌಶಲ್ಯಗಳಲ್ಲಿ ತರಬೇತಿಗೊಳಿಸುವ ಗುರಿಯನ್ನು ನಿಟ್ಟೆ ಇಂಜಿನಿಯರಿಂಗ್ ಸಂಸ್ಥೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News