ಜೂ. 7: ನೂತನ ಕಚೇರಿ ಉದ್ಘಾಟನೆ
Update: 2017-06-03 22:41 IST
ಕಾರ್ಕಳ, ಜೂ. 3: ಸ್ಥಳೀಯ ತಾಲೂಕು ಹಿರಿಯ ನಾಗರಿಕರ ಸಂಘದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ಹಾಗೂ ಸಂಘದ ವಾರ್ಷಿಕ ಮಹಾಸಭೆಯು ಹಳೇ ತಾಲೂಕು ಕಚೇರಿಯ ವಠಾರದಲ್ಲಿ ಜೂ.7ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಸಂಘದ ಮಹಾಸಭೆಯು ಮಧ್ಯಾಹ್ನ 2.30 ಗಂಟೆಗೆ ರಾಮ ಮಂದಿರದಲ್ಲಿ ನಡೆಯಲಿದೆ.
ಹಿರಿಯ ಸಿವಿಲ್ ನ್ಯಾಯಾಧೀಶೆ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಅಮೃತಾ ಎಸ್. ರಾವ್ ಉದ್ಘಾಟಿಸಲಿದ್ದು, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕೆ.ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಎಸ್.ಪಿ. ಕೆ.ಟಿ.ಬಾಲಕೃಷ್ಣ ಐಪಿಎಸ್, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪನಾಗ ಸಿ.ಟಿ. ಐಎಎಸ್ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.