×
Ad

ಎಸ್ಕೆಎಸ್ಸೆಸ್ಸೆಫ್ : ಖಲೀಲ್ ಹುದವಿಯವರ ರಮಝಾನ್ ಪ್ರವಚನಕ್ಕೆ ಚಾಲನೆ

Update: 2017-06-03 23:02 IST


  ಮಂಜೇಶ್ವರ. ಜೂ,3 : ಮಂಜೇಶ್ವರ ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿ ಹೊಸಂಗಡಿ ಶಂಸುಲ್ ಉಲಮಾ ನಗರದಲ್ಲಿ ಆಯೋಜಿಸಿರುವ ಸೂರತ್ ಯಾಸೀನ್ ಆತ್ಮಾವಿನೊಂದಿಗೆ ಮಾತನಾಡುತ್ತಿದೆ ಎಂಬ ವಿಷಯದಲ್ಲಿ ಖಲೀಲ್ ಹುದವಿ ಯವರ ರಮಝಾನ್ ಪ್ರವಚನಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ದೊರೆಯಿತು.  

ಇಂದು ನಡೆದ ಮಜ್ಲಿಸುನ್ನೂರ್ ಗೆ ಸಯ್ಯಿದ್ ಹಾಮಿದ್‌ ಕೋಯಮ್ಮ ತಙಲ್ ನೇತೃತ್ವ ನೀಡಿದರು. ಇಬ್ರಾಹಿಂ ಹಾಜಿ ಸಫಾ ಅಧ್ಯಕ್ಷತೆ ವಹಿಸಿದರು. ಇಬ್ರಾಹಿಂ ಬಾತಿಶಾ ತಂಙಲ್ ಕಾರ್ಯಕ್ರಮವನ್ನು ಉದ್ಘಾಟಿಸದರು. ಕಜೆ ಮುಹಮ್ಮದ್ ಫೈಝಿ ಸ್ವಾಗತಿಸಿದರು. ಇಸ್ಮಾಯಿಲ್‌ಅರ್ಹರಿ , ಸಿದ್ದೀಕ್ ಅರ್ಹರಿ , ಮುಹ್ಯದ್ದೀನ್‌ಅರ್ಹರಿಕಡಂಬಾರ್ , ಹನೀಫ್ ನಿಝಾಮಿ ಮೊದಲಾದವರು ಉಪಸ್ತಿತರಿದ್ದರು. ಪ್ರವಚನ ಜೂನ್ 6 ರಂದು ಸಮಾರೋಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News