×
Ad

ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿಯಿಂದ ಕಿಟ್ ವಿತರಣೆ

Update: 2017-06-04 15:17 IST


 

ಬಂಟ್ವಾಳ, ಜೂ. 1: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣಾ ಸರಳ ಕಾರ್ಯಕ್ರಮ ಅಕ್ಕರಂಗಡಿಯ ತಾಲೂಕು ಕಚೇರಿಯಲ್ಲಿ ಜರಗಿತು. ಒಟ್ಟು 98 ಅರ್ಹ ಬಡ ಕುಟುಂಬಗಳಿಗೆ 1,65,000 ರೂ. ವೆಚ್ಚದ ಕಿಟ್‌ಗಳನ್ನು ವಿತರಿಸಲಾಯಿತು.

 ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ನಂದರಬೆಟ್ಟು, ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಲೀಮ್ ಫರಂಗಿಪೇಟೆ, ತಾಲೂಕು ಸಮಿತಿ ಸದಸ್ಯ ರಹಿಮಾನ್ ಗೂಡಿನಬಳಿ, ರಹೀಮ್ ಆಲಂಪಾಡಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News