×
Ad

1.44 ಕೋ.ರೂ.ನಕಲಿ ನೋಟುಗಳು ವಶ,ಇಬ್ಬರ ಸೆರೆ

Update: 2017-06-04 20:01 IST

ತೆಂಕಾಶಿ(ತ.ನಾ),ಜೂ.4: ಶನಿವಾರ ಇಲ್ಲಿಯ ಬಸ್‌ನಿಲ್ದಾಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಬಳಿಯಿಂದ ಸುಮಾರು 1.4 ಕೋ.ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಹಸನ್(61) ಮತ್ತು ಸಾಮಿದುರೈ (49) ಬಂಧಿತ ಆರೋಪಿಗಳಾಗಿದ್ದಾರೆ.

ಬಸ್‌ನಿಲ್ದಾಣದಲ್ಲಿ ಶಂಕಾಸ್ಪದವಾಗಿ ತಿರುಗಾಡುತ್ತಿದ್ದ ಅವರನ್ನು ಪೊಲೀಸರು ತಪಾಸಣೆಗೊಳಪಡಿಸಿದಾಗ ಅವರ ಬಳಿ ಆರು ಲಕ್ಷ ರೂ.ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವು. ಬಳಿಕ ಸಾಮಿದುರೈ ಮನೆಯಿಂದ 2,000,500 ಮತ್ತು 100 ರೂ.ಮುಖಬೆಲೆಗಳ ಒಟ್ಟು 1,36,60,000 ರೂ.ವೌಲ್ಯದ ಇನ್ನಷ್ಟು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳೊಂದಿಗೆ ನಕಲಿನೋಟುಗಳ ತಯಾರಿಕೆಗೆ ಬಳಸಲಾ ಗುತ್ತಿದ್ದ ಮೂರು ಝೆರಾಕ್ಸ್ ಯಂತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News