ಚೀನಾದಿಂದ ಭಾರತದ ವಾಯುಪ್ರದೇಶದ ಉಲ್ಲಂಘನೆ
ಹೊಸದಿಲ್ಲಿ, ಜೂ.4: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಚೀನಿ ಸೇನೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಹಾರಾಟ ನಡೆಸಿದ್ದು, ಭಾರತದ ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ವರ್ಷದ ಮಾರ್ಚ್‌ನಿಂದ ಚೀನಾದ ಜನತಾ ವಿಮೋಚನಾ ಸೇನೆ (ಪಿಎಲ್‌ಎ)ಯು ಭಾರತೀಯ ವಾಯುಪ್ರದೇಶದ ಉಲ್ಲಂಘಿಸಿರುವುದು ಇದು ನಾಲ್ಕನೆಯ ಸಲವಾಗಿದೆ.
ಭಾರತದ ವಾಯುಪ್ರದೇಶದಲ್ಲಿ ಸುಮಾರು ಐದು ನಿಮಿಷಗಳ ಹಾರಾಟ ನಡೆಸಿದ ಈ ಹೆಲಿಕಾಪ್ಟರ್‌ಗಳು ಆನಂತರ ಚೀನಾದ ಗಡಿಯಾಚೆಗೆ ಮರಳಿದವು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಹೆಲಿಕಾಪ್ಟರ್‌ಗಳು ಭಾರತದ ಭೂಸೇನಾಪಡೆಗಳ ವೈಮಾನಿಕ ಛಾಯಾಚಿತ್ರವನ್ನು ತೆಗೆದಿರಬಹುದೆಂದು ಶಂಕಿಸಲಾಗಿದೆ. ಈ ಘಟನೆಯ ಬಗ್ಗೆ ಭಾರತೀಯ ವಾಯುಪಡೆಯು ತನಿಖೆ ನಡೆಸುತ್ತಿರುವುದಾಗಿ ಅಧಿಕತ ಮೂಲಗಳು ತಿಳಿಸಿವೆ. ಭಾರತೀಯ ವಾಯುಸೀಮೆಯನ್ನು ಪ್ರವೇಶಿಸಿದ ಈ ಹೆಲಿಕಾಪ್ಟರ್‌ಗಳು, ಝೀಬಾ ಸರಣಿಯ ದಾಳಿ ಹೆಲಿಕಾಪ್ಟರ್‌ಗಳೆಂದು ಗುರುತಿಸಲಾಗಿದೆ. ಈ ಹಿಂದೆಯೂ ಚೀನಿ ಹೆಲಿಕಾಪ್ಟರ್‌ಗಳು ಭಾರತೀಯ ಪ್ರಾಂತದ ವಾಯುಪ್ರದೇಶದಿಂದ ಸುಮಾರು 4.5 ಕಿ.ಮೀ.ವರೆಗೆ ಪ್ರವೇಶಿಸಿದ್ದವು. ಈ ಪ್ರದೇಶವನ್ನು ಚೀನು ತನ್ನದೆಂದು ವಾದಿಸುತ್ತಿದ್ದು, ಅದಕ್ಕೆ ವು-ಜೆ ಎಂದು ಹೆಸರಿನ್ನಿಟ್ಟಿದೆ. ಈ ಪ್ರದೇಶಗಳಲ್ಲಿ ಚೀನಾದ ಒಳನುಸುಳುವಿಕೆಯ ಸರಣಿ ಘಟನೆಗಳು ವರದಿಯಾದ ಬಳಿಕ ಭಾರತವು ಟಿಬೆಟ್‌ನೊಂದಿಗಿನ ತನ್ನ 350 ಕಿ.ಮೀ. ವಿಸ್ತೀರ್ಣದ ಗಡಿಪ್ರದೇಶದ ಭದ್ರತಾ ವ್ಯವಸ್ಥೆಯನ್ನು ಪರಾಮರ್ಶಿಸುತ್ತಿದೆ.
2000ನೇ ಇಸವಿಯ ಜೂನ್‌ನಲ್ಲಿ ಕೇಂದ್ರ ಸರಕಾರ ಏಕಪಕ್ಷೀಯ ರರಉತ್ತರಪ್ರದೇಶ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಪ್ರದೇಶಗಳನ್ನೊಳಗೊಂಡ ಮೂರು ಗಡಿಠಾಣೆಗಳಲ್ಲೊಂದಾದ ಬರಾಹೋಟಿಯಲ್ಲಿ ಐಟಿಬಿಪಿ ಯೋಧರಿಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ ಹಾಗೂ ಅವರು ನಾಗರಿಕ ಉಡುಪುಗಳಲ್ಲಿರಬೇಕಾಗುತ್ತದೆ.