×
Ad

ಕ್ಷಿಪ್ರ ಪ್ರತಿಕ್ರಿಯಾ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2017-06-04 20:55 IST

ಬಾಲಾಸೋರ್(ಒಡಿಶಾ),ಜೂ.4: ಭಾರತವು ದೇಶೀಯವಾಗಿ ಅಭಿವೃದ್ಧಿಗೊಳಿ ಸಿರುವ, ನೆಲದಿಂದ ಆಗಸಕ್ಕೆ ಚಿಮ್ಮುವ, ಅಲ್ಪವ್ಯಾಪ್ತಿಯ ಕ್ಷಿಪ್ರ ಪ್ರತಿಕ್ರಿಯಾ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರವಿವಾರ ಒಡಿಶಾ ಕರಾವಳಿಯಾಚೆಯ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು.

ಮಧ್ಯಾಹ್ನ 12:40ರ ಸುಮಾರಿಗೆ ಈ ಪರೀಕ್ಷಾರ್ಥ ಪ್ರಯೋಗವನ್ನು ಕೈಗೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿದವು.

ಇದು ಈ ಅತ್ಯಾಧುನಿಕ ಕ್ಷಿಪಣಿಯ ಅಭಿವೃದ್ಧಿ ಹಂತದಲ್ಲಿನ ಪರೀಕ್ಷಾರ್ಥ ಪ್ರಯೋಗ ವಾಗಿದ್ದು, ಆಗಸದಲ್ಲಿ ಏರ್ಪಡಿಸಲಾಗಿದ್ದ ನಿರ್ದಿಷ್ಟ ಗುರಿಯನ್ನು ಯಶಸ್ವಿಯಾಗಿ ಭೇದಿಸಿದೆ ಎಂದೂ ಅವು ತಿಳಿಸಿದವು. ಡಿಆರ್‌ಡಿಒ ಇತರ ಸಂಸ್ಥೆಗಳ ಸಹಭಾಗಿತ್ವದೊಡನೆ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿದೆ.

20-30 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿ ಒಂದಕ್ಕಿಂತ ಹೆಚ್ಚು ಗುರಿಗಳ ಮೇಲೆ ಎರಗಬಲ್ಲುದು. ಕ್ಷಿಪ್ರ ಪ್ರತಿಕ್ರಿಯಾ ಕ್ಷಿಪಣಿಯಾಗಿ ವಿನ್ಯಾಸಗೊಳಿಸಲಾಗಿ ರುವ ಇದು ಸರ್ವಋತು ಶಸ್ತ್ರಾಸ್ತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News