×
Ad

ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಪರಿಸರ ದಿನಾಚರಣೆ, ಸ್ವಾಗತ ಕಾರ್ಯಕ್ರಮ

Update: 2017-06-05 16:25 IST

ಮಂಗಳೂರು,ಜೂ.5 : ಪ್ರಕೃತಿಯು ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ ಆದರೆ ಸ್ವಾರ್ಥದಿಂದ ಜನರು ಲಾಭ ಮಾತ್ರ ಪಡೆದು ಅದರ ರಕ್ಷಣೆ ಮಾಡುವ ಜವಾಬ್ದಾರಿಯಿಂದ ದೂರ ಸರಿ0ುುತ್ತಾರೆ. ಇಂದಿನ ದಿನ ನಾವು ಪ್ರಕೃತಿಯನ್ನು ರಕ್ಷಿಸುತೇವೆ ಎಂಬ ಪ್ರತಿಜ್ಞೆ ಕೈಗೊಳ್ಳೊಣ. ಉದಾಸೀನ ಪ್ರವೃತ್ತಿಯನ್ನು ತ್ಯಜಿಸಿ ಪ್ರಕೃತಿ0ುನ್ನು ರಕ್ಷಿಸೋಣ. ಸ್ವಚ್ಛ ಪರಿಸರ, ಸ್ವಚ್ಛ ಪ್ರಕೃತಿಯ ಭಾವನೆ0ೊಂದಿಗೆ ಪ್ರಕೃತಿಯ ರಕ್ಷಣೆ ಮಾಡೋಣ ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ರೆ.ಫಾ. ರೋಬರ್ಟ್ ಡಿಸೋಜ ಹೇಳಿದರು.

ಅವರು ಶಾಲೆ0ುಲ್ಲಿ ಆಚರಿಸಿದ ವಿಶ್ವ ಪರಿಸರ ದಿನದ ಆಚರಣೆಯಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಶಾಲಾ ಪ್ರಾರ್ಥನಾ ಸಭೆಯ ನಂತರ ಜರುಗಿದ ಕಿರು ಕಾರ್ಯಕ್ರಮದಲ್ಲಿ ಕುಮಾರಿ ಶಾಶ ಲೋಬೊ ಪರಿಸರ ದಿನದ ಕುರಿತು ನಮ್ಮ ಕಾಳಜಿ ಮತ್ತು ಕರ್ತವ್ಯದ ಬಗ್ಗೆ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News