ಜಿಸಿಸಿ ದೇಶಗಳು ಒಂದಾಗಿ ಇರಬೇಕು: ಅಮೆರಿಕ
Update: 2017-06-05 19:52 IST
ಸಿಡ್ನಿ, ಜೂ. 5: ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ದೇಶಗಳು ಒಂದಾಗಿ ನಿಲ್ಲುವುದು ಅಗತ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಸೋಮವಾರ ಹೇಳಿದರು.
ಆಸ್ಟ್ರೇಲಿಯ ಪ್ರವಾಸದಲ್ಲಿರುವ ಅವರು ಸಿಡ್ನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಬಿಕ್ಕಟ್ಟಿನಿಂದ ಗಣನೀಯ ಪರಿಣಾಮ ಉಂಟಾಗದು ಎಂಬ ನಿರೀಕ್ಷೆಯನ್ನು ಟಿಲರ್ ವ್ಯಕ್ತಪಡಿಸಿದರು. ‘‘ಇದರಿಂದ ಯಾವುದಾದರು ಪರಿಣಾಮ ಉಂಟಾಗುವುದಾದರೆ ಅದು ಭಯೋತ್ಪಾದನೆ ವಿರುದ್ಧದ ಒಗ್ಗಟ್ಟಿನ ಹೋರಾಟದ ಮೇಲೆ ಮಾತ್ರ’’ ಎಂದರು.