×
Ad

ಆಧಾರ್ ಸೀಡಿಂಗ್ ತರಬೇತಿ

Update: 2017-06-05 20:44 IST

ಉಡುಪಿ, ಜೂ.5: ಇ ಆಡಳಿತ ಕೇಂದ್ರ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಧಾರ್ ನೊಂದಣಿ, ಸೀಡಿಂಗ್ ಮತ್ತು ಆಧಾರ್‌ಗೆ ಸಂಬಂಧಿಸಿದ ಸೇವೆಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಮಣಿಪಾಲ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆಯಿತು.

 ಕಾರ್ಯಕ್ರಮದಲ್ಲಿ ಆಧಾರ್ ಕಾರ್ಡ್ ನೊಂದಣಿ, ಪ್ರಯೋಜನ ಮತ್ತು ಸರಕಾರದ ವಿವಿಧ ಇಲಾಖೆಗಳಲ್ಲಿ ಆಧಾರ್ ಮೂಲಕ ನೀಡಬಹುದಾದ ಸೇವೆಗಳ ಬಗ್ಗೆ ಇ ಆಡಳಿತ ಕೇಂದ್ರದ ಯೋಜನ ವ್ಯವಸ್ಥಾಪಕ ರವಿಕುಮಾರ್ ಕೆ. ಮಾಹಿತಿ ನೀಡಿದರು.

ಒಬ್ಬ ವ್ಯಕ್ತಿಗೆ ಒಂದೇ ಆಧಾರ್ ಕಾರ್ಡ್, ಯಾವುದೇ ವಿಧಾನದಿಂದಲೂ ಒಬ್ಬನೇ ವ್ಯಕ್ತಿಗೆ 2ನೇ ಆಧಾರ್ ಕಾರ್ಡ್ ಸೃಷ್ಠಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಬಯೋಮೆಟ್ರಿಕ್ ಆಧಾರದಲ್ಲಿ ಮಾತ್ರ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಅಲ್ಲದೇ ಆಧಾರ್‌ನಲ್ಲಿ ನೀಡಿರುವ ಸಾರ್ವಜನಿಕರ ಮಾಹಿತಿಗಳು ಅತ್ಯಂತ ಸುರಕ್ಷಿತವಾಗಿದ್ದು, ಈಗಾಗಲೇ ಸರಕಾರದ ಹಲವು ಯೋಜನೆಗಳ ಫಲಾನುಭವಿಗಳು ಆಧಾರ್ ಮೂಲಕ ವಿವಿಧ ಪ್ರಯೋಜನಗಳನ್ನು ಪಡೆಯು ತಿದ್ದಾರೆ. ಅಶಕ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಮನೆಮನೆಗೆ ತೆರಳಿ ಆಧಾರ್ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಕಿಟ್‌ಗಳನ್ನು ವಿತರಿಸಲಾ ಗಿದೆ. ಎಲ್ಲಾ ಇಲಾಖೆಗಳು ತಮ್ಮ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲ್ಯಗಳನ್ನು ನೀಡಲು ಆಧಾರ್ ಬಳಸಿಕೊಳ್ಳುವಂತೆ ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಕಾರ್ಯಕ್ರಮ ಉದ್ಘಾಟಿಸಿದರು. ಸಂಪತ್ ಕಾರ್ಯಕ್ರಮ ನಿರ್ವಹಿಸಿದರು. ಇ ಆಡಳಿತ ವಿಭಾಗದ ತರಬೇತು ದಾರ ರಘುವಂಶಿ, ಶ್ರೇಯಸ್ ರಾವತ್, ನಾಗರಾಜ್ ಎಂ. ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಕಾರ್ಯಕ್ರಮ ಉದ್ಘಾಟಿಸಿದರು. ಸಂಪತ್‌ ಕಾರ್ಯಕ್ರಮ ನಿರ್ವಹಿಸಿದರು. ಇ ಆಡಳಿತ ವಿಭಾಗದ ತರಬೇತು ದಾರ ರಘುವಂಶಿ, ಶ್ರೇಯಸ್ ರಾವತ್, ನಾಗರಾಜ್ ಎಂ. ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News