ಕಬೆಲ- ಪೆಲಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ
Update: 2017-06-05 20:59 IST
ಬಂಟ್ವಾಳ, ಜೂ. 5: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ರವರ ಪ್ರಧೇಶಾಭಿವೃದ್ಧಿ ನಿಧಿಯಡಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುದು ಗ್ರಾಮದ ಕಬೆಲ- ಪೆಲಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಸಚಿವರು ಒದಗಿಸಿಕೊಟ್ಟಿದ್ದಾರೆ. ತಮ್ಮ ಊರಿನ ಅಭವೃದ್ಧಿಗೆ ಶ್ರಮಿಸಿದ ಸಚಿವರ ಉಪಕಾರ ಸ್ಮರಣೆಯನ್ನು ಗ್ರಾಮಸ್ಥರು ಮಾಡಿಕೊಳ್ಳಬೇಕಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್, ಝಾಹೀರ್, ನೀಲನ್ ನೆತ್ತರಕೆರೆ, ಕಿಶೋರ್ ಕುಮಾರ್, ಸದಾಶಿವ, ಶರೀಫ್ ಹತ್ತನೆಮೈಲು, ಮಜೀದ್ ಫರಂಗಿಪೇಟೆ, ಇಂಶಾದ್ ಮಾರಿಪಳ್ಳ ಮತ್ತಿತರರು ಹಾಜರಿದ್ದರು.