ಶಾಲಾ ಗುಮಾಸ್ತೆ ನಾಪತ್ತೆ
Update: 2017-06-05 22:03 IST
ಕೋಟ, ಜೂ.5: ಯಡಾಡಿ ಮತ್ಯಾಡಿ ಗ್ರಾಮದ ಲಿಟ್ಲ್ ಸ್ಟಾರ್ ಶಾಲೆಯ ಗುಮಾಸ್ತೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ಯಡಾಡಿ ಮತ್ಯಾಡಿ ಗ್ರಾಮದ ಕೆಸನಮಕ್ಕಿ ನಿವಾಸಿ ನಾರಾಯಣ ಪೂಜಾರಿ ಎಂಬವರ ಮಗಳು ಲಲಿತಾ(32) ಎಂದು ಗುರು ತಿಸಲಾಗಿದೆ.
ಇವರು ಜೂ. 4ರಂದು ಮನೆಯಿಂದ ಕೆಲಸದ ಬಗ್ಗೆ ಶಾಲೆಗೆ ಹೋಗಿ ಶಾಲೆಯಲ್ಲಿ ತಾನು ಬೆಂಗಳೂರಿಗೆ ಹೋಗುವುದಾಗಿ ಹೇಳಿ ರಾಜೀ ನಾಮೆ ಪತ್ರವನ್ನು ನೀಡಿದ್ದರು. ಬಳಿಕ ಚೀಟಿಯೊಂದನ್ನು ಬರೆದು, ಅದನ್ನು ಮನೆಯಲ್ಲಿ ಇಟ್ಟು, ತನ್ನ ಅಕ್ಕ ಸುನೀತಾರ ಮೊಬೈಲ್‌ಗೆ ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.