×
Ad

ಕುರ್ಚಿ ಕದ್ದ ಆರೋಪ: ಯುವಕರನ್ನು ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು

Update: 2017-06-05 22:18 IST

ಬಿಹಾರ, ಜೂ.5: ಮದುವೆ ಸಮಾರಂಭಕ್ಕೆ ತಂದಿದ್ದ 5 ಕುರ್ಚಿಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಇಬ್ಬರು ಯುವಕರನ್ನು ತಲೆಕೆಳಗಾಗಿ ಮರಕ್ಕೆ ಕಟ್ಟಿಹಾಕಿದ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ರಾಜ್ ಕುಮಾರ್ ಬಿಂದ್ ಹಾಗೂ ಬೀರ್ ಬಲ್ ಬಿಂದ್ ಎಂದು ಗುರುತಿಸಲಾಗಿದೆ. ಗಂಟೆಗಳ ಕಾಲ ತಲೆಕೆಳಗಾಗಿ ಕಟ್ಟಿಹಾಕಿದ ಅವರಿಬ್ಬರನ್ನು ಮನೆಮಂದಿ 3 ಸಾವಿರ ರೂ. ನೀಡಿದ ಬಳಿಕವೇ ಬಿಡುಗಡೆಗೊಳಿಸಲಾಯಿತು.

ಕೈಮೂರ್ ಜಿಲ್ಲೆಯ ಸೋನ್ ಬರ್ಸಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವಕರಿಗೆ ಹಲ್ಲೆ ನಡೆಸಿದ ಗುಂಪು ಅವರಿಬ್ಬರನ್ನು ತಲೆಕೆಳಗಾಗಿ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿತ್ತು. ಈ ಭೀಕರ ಹಲ್ಲೆ ನಡೆಯುತ್ತಿದ್ದ ಸಂದರ್ಭ ಸುತ್ತುವರಿದಿದ್ದ ಯಾರೂ ಯುವಕರ ರಕ್ಷಣೆಗೆ ಧಾವಿಸಲಿಲ್ಲ. ಕೊನೆಗೆ ಯುವಕರ ಬಡ ಪೋಷಕರು ಮಹಾಂಗ್ ಬಿಂದ್ ಎಂಬಾತನಿಗೆ ಹಣ ನೀಡಿದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು.

ಘಟನೆಗೆ ಸಂಬಂಧಪಟ್ಟಂತೆ ನುವಾನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.  ಒಬ್ಬನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News