ವಿಶ್ವ ಪರಿಸರ ದಿನಾಚರಣೆ: ಬೀಜದುಂಡೆ ವಿತರಣೆ
Update: 2017-06-05 22:27 IST
ಉಡುಪಿ, ಜೂ.5: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಸಾಸ್ತಾನ ಮಿತ್ರ ಬಳಗದ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಇಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಸಾಸ್ತಾನ ಮಿತ್ರ ಬಳಗದ ವಿನಯ ಚಂದ್ರ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸಿ, ಬೀಜದುಂಡೆಗಳ ತಯಾರಿಕೆ ಮತ್ತು ಬೀಜ ನೆಡುವ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಡಾ.ಸುಲತಾ ಭಂಡಾರಿ ಬೀಜದುಂಡೆಗಳನ್ನು ಪರಿಸರ ಪ್ರೇಮಿಗಳಿಗೆ ವಿತರಿಸಿದರು.
ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸ್ವಾಗತಿಸಿದರು. ತಾರಾನಾಥ್ ಮೇಸ್ತ ಶಿರೂರು ವಂದಿಸಿದರು.