ವಿದ್ಯಾಪೋಷಕ್ ವಿದ್ಯಾರ್ಥಿಗಳ ಶೈಕ್ಷಣಿಕ ಸನಿವಾಸ ಶಿಬಿರ
Update: 2017-06-05 22:47 IST
ಉಡುಪಿ, ಜೂ.5: ದ್ವಿತೀಯ ಪಿಯುಸಿ ಮತ್ತು ಪ್ರಥಮ ಪದವಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಒಂದು ದಿನದ ಮಾರ್ಗದರ್ಶನ ಶಿಬಿರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ ಪ್ರದೀಪ್ ಜೋಗಿ, ಮಣಿಪಾಲ್ ಡಾಟ್‌ನೆಟ್‌ನ ನಿರ್ದೇಶಕ ಡಾ. ಯು.ಸಿ ನಿರಂಜನ್ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಡಾ. ಎ.ಪಿ ಭಟ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮಾತನಾಡಿ ವಿದ್ಯಾರ್ಥಿ ಗಳು ರೂಡಿಸಿಕೊಳ್ಳಬೇಕಾದ ಸಂಗತಿಗಳ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್ ಶೃಂಗೇಶ್ವರ ಉಪಸ್ಥಿತರಿದ್ದರು.