×
Ad

ಸ್ವರ್ಣೆಯಲ್ಲಿ ಇನ್ನೂ ಆರಂಭಗೊಳ್ಳದ ಒಳಹರಿವು

Update: 2017-06-05 22:48 IST

ಉಡುಪಿ, ಜೂ.5: ಮುಂಗಾರು ಮಳೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಉಡುಪಿ ಜಿಲ್ಲೆಗೆ ಕಾಲಿರಿಸದೇ, ಮಳೆ  ಕಣ್ಣಾಮುಚ್ಚಾಲೆ ಆಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಕ್ಕೆ ಕುಡಿಯುವ ನೀರಿನ ಮೂಲವಾದ ಸ್ವರ್ಣನದಿಯಲ್ಲಿ ನೀರಿನ ಒಳ ಹರಿವು ಇನ್ನೂ ಪ್ರಾರಂಭಗೊಂಡಿಲ್ಲ. ಹೀಗಾಗಿ ನಗರಸಭೆ ಈಗಲೂ ನಾಲ್ಕು ದಿನಗಳಿಗೊಮ್ಮೆ ನೀರನ್ನು ನೀಡುವ ಅನಿವಾರ್ಯ ಸ್ಥಿತಿ ಮುಂದುವರಿದಿದೆ ಎಂದು ನಗರ ಸಭೆಯ ಪರಿಸರ ಇಂಜಿನಿಯರ್ ಬಿ.ಎಸ್.ರಾಘವೇಂದ್ರ ತಿಳಿಸಿದ್ದಾರೆ.

ನಗರಸಭೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿ ಯಾದಂತೆ ಇಂದು ಮತ್ತು ನಾಳೆ ನೀರನ್ನು ಬಿಡಲಾಗುವುದು. ಮುಂದೆ ಗುರುವಾರ ಮತ್ತು ಶುಕ್ರವಾರ ನೀರನ್ನು ಬಿಡಲಾಗುತ್ತದೆ. ಈ ನಡುವೆ ಮಳೆ ತೀವ್ರಗೊಂಡು ಸ್ವರ್ಣ ನದಿಯಲ್ಲಿ ನೀರು ಮೇಲಿನಿಂದ ಹರಿದು ಬಂದು ಬಜೆಯಲ್ಲಿ ನೀರಾದರೆ ಪರಿಸ್ಥಿತಿ ಸುಧಾರಿಸಬಹುದು ಎಂದವರು ಹೇಳಿದರು.
 
ಆಗಾಗ ಸ್ವಲ್ಪ ಮಳೆ ಬರುತ್ತಿರುವುದರಿಂದ ಹೊಂಡಗಳಲ್ಲಿರುವ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಿದೆ. ಇದರಿಂದ ಆ ನೀರನ್ನು ಡ್ರೆಜಿಂಗ್ ಮಾಡಿ, ನಗರಕ್ಕೆ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಉಳಿದಂತೆ 16-18 ಟ್ಯಾಂಕರ್ ಮೂಲಕ ಅಗತ್ಯವಿರುವಲ್ಲಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಬೀಳುತ್ತಿರುವುದಿಂದ ಟ್ಯಾಂಕರ್ ನೀರಿನ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ ಎಂದು ರಾಘವೇಂದ್ರ ತಿಳಿಸಿದರು.

ಸ್ವರ್ಣೆಯಲ್ಲಿ ಇನ್ನೂ ಆರಂಭಗೊಳ್ಳದ ಒಳಹರಿವು: 
ನಗರದಲ್ಲಿರುವ ಎಲ್ಲಾ ತೋಡು ಹಾಗೂ ಒಳಚರಂಡಿಗಳನ್ನು ಸ್ವಚ್ಚಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News