×
Ad

ಮೂಡುಬಿದಿರೆ: ವಸತಿ ಗೃಹದಲ್ಲಿ ಕಳವು

Update: 2017-06-05 23:59 IST

ಮೂಡುಬಿದಿರೆ, ಜೂ.5: ತಹಶೀಲ್ದಾರ್ ಕಚೇರಿಯ ಬಳಿಯಿರುವ ಆರೋಗ್ಯ ಇಲಾಖೆಯ ವಸತಿಗೃಹ ಒಂದರಲ್ಲಿ  ಕಳ್ಳತನ ನಡೆದಿದೆ.

ಆರೋಗ್ಯ ಇಲಾಖೆಯ ಸ್ಟಾಪ್ ನರ್ಸ್ ಶಾಲಿನಿ ಹಾಗೂ ಅವರ ಪತಿ ಸ್ಥಳೀಯ ಜುವ್ಯೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿರುವ ಸುಧಾಕರ್ ಅವರು ಮೂಡುಬಿದಿರೆ ತಹಶೀಲ್ದಾರ್ ಕಚೇರಿ ಬಳಿಯ ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ವಾಸವಾಗಿದ್ದು, ಶಾಲಿನಿ ಆರೋಗ್ಯ ಇಲಾಖೆಯ ತರಬೇತಿಗಾಗಿ ಹಾಸನಕ್ಕೆ ತೆರಳಿದ್ದರು.

ಸುಧಾಕರ್ ಅವರು ಸಹೋದರ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News