×
Ad

ದ.ಕ.ಜಿಲ್ಲಾ ಎನ್‌ಎಸ್‌ಯುಐಗೆ ಆಯ್ಕೆ

Update: 2017-06-07 17:32 IST

ಮಂಗಳೂರು, ಜೂ.7: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ದ.ಕ.ಜಿಲ್ಲಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಿಗೆ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಚುನಾವಣೆ ನಡೆಯಿತು.

ಜಿಲ್ಲೆಯಲ್ಲಿ 1,170 ಎನ್‌ಎಸ್‌ಯುಐ ಸದಸ್ಯರಿದ್ದು, 540 ಮಂದಿ ಮತ ಚಲಾಯಿಸಿದರು. ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಅಬ್ದುಲ್ಲಾ ಬಿನ್ ಅಮೀನ್ ಮತ್ತು ಶೌಹಾದ್ ಗೂನಡ್ಕರ ನಡುವೆ ನೇರ ಸ್ಪರ್ಧೆ ನಡೆಯಿತು. ಅಬ್ದುಲ್ಲಾ ಬಿನ್ ಅಮೀನ್ 343 ಮತಗಳನ್ನು ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಬ್ದುಲ್ಲಾ ಬಿನ್ ಅಮೀನ್ ಪ್ರಸ್ತುತ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ 4ನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಶೌಹಾದ್ ಗೂನಡ್ಕ 185 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅಬ್ದುಲ್ ರಹ್ಮಾನ್ ಅವುಫ್ ಅಡ್ಕ 285 ಮತಗಳನ್ನು ಪಡೆದು ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ, ಸಂಕೇತ್ ಶೆಟ್ಟಿ 122 ಮತಗಳನ್ನು ಪಡೆದು ದ್ವಿತೀಯ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಶವಾದ್ 58 ಮತಗಳನ್ನು ಪಡೆದು ತೃತೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಲಿಸ್ಟನ್ ಸಿಕ್ವೇರಾ, ಸ್ವಸ್ತಿಕ್ ಸುವರ್ಣ ಮತ್ತು ಟಿ. ಮುಹಮ್ಮದ್ ಶಾಝ್ ಜಿಲ್ಲಾ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೇರಳದ ರಮೀಝ್ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News