×
Ad

ಅತಿಥಿಗಳಾಗಿ ಬಂದ ಯುವತಿಯರು: ಚಿನ್ನಾಭರಣದೊಂದಿಗೆ ಪರಾರಿ

Update: 2017-06-07 18:11 IST

ಮಂಜೇಶ್ವರ, ಜೂ.7 : ಅತಿಥಿಯಾಗಿ ಬಂದ ಯುವತಿಯರಿಬ್ಬರು ಮನೆಯಿಂದ ಸುಮಾರು 9 ಪವನ್‌ ಚಿನ್ನದೊಡವೆಯನ್ನು ಕಳವು ಮಾಡಿದ ಘಟನೆ ಚೆರ್ಕಳ ನಾಲ್ಕನೇ ಮೈಲಿನಲ್ಲಿ ನಡೆದಿದೆ.

ಚೆಂಗಳ ನಾಲ್ಕನೇ ಮೈಲಿನ ಇ.ಕೆ. ನಾಯನಾರ್ ಆಸ್ಪತ್ರೆ ಬಳಿಯ ಅಬ್ದುಲ್ ಅಝೀಝ್ ಸಿ.ಎ. (27) ಎಂಬವರ ಮನೆಯಿಂದ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಅಬ್ದುಲ್ ಅಝೀಝ್ ರ ಪತ್ನಿಯೊಂದಿಗೆ ಗೆಳೆತನ ಹೊಂದಿದ್ದ ಆರಿಫಾ (25) ಮತ್ತು ಹಬೀಬಾ (24) ಎಂಬವರು ಮನೆಯ ಬೆಡ್ ರೂಂನ ಕಪಾಟಿನಲ್ಲಿದ್ದ 9 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದಾಗಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News