ವರದಕ್ಷಿಣೆ ಕಿರುಕುಳ: ನಾಲ್ವರ ವಿರುದ್ಧ ದೂರು
Update: 2017-06-07 18:16 IST
ಮಂಜೇಶ್ವರ, ಜೂ. 7: ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಸಂಬಂಧ ದೇರಳಕಟ್ಟೆ ನಿವಾಸಿ ರಮ್ಲತ್ ಬಾನು(25) ನೀಡಿದ ದೂರಿನಂತೆ ಅವರ ಪತಿ ಕುಳೂರು ನಿವಾಸಿ ಕೊಲ್ಲಿ ಉದ್ಯೋಗಿ ಶೇಕ್ ಅಹಮ್ಮದ್ ಮನ್ಸೂರ್, ಅತ್ತೆ ಬುಶ್ರ, ನಾದಿನಿ ಝೀನತ್, ಮೈದುನನ ವಿರುದ್ಧ ದೂರು ದಾಖಲಾಗಿದೆ.
2016 ಫೆಬ್ರವರಿ 18 ರಂದು ರಮ್ಲತ್ ಬಾನು ಮತ್ತು ಶೇಕ್ ಅಹಮ್ಮದ್ ಮನ್ಸೂರ್ ವಿವಾಹವಾಗಿತ್ತು. ಇದೀಗ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.