×
Ad

ನಿಟ್ಟೆ ಎನ್‌ಎಂಎಎಂಐಟಿಯಲ್ಲಿ ಪ್ರತಿಭಾನ್ವಿತರಿಗೆ ಶುಲ್ಕ ರಿಯಾಯಿತಿ

Update: 2017-06-07 20:09 IST

ಕಾರ್ಕಳ, ಜೂ.7: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಶಿಕ್ಷಣ ಸಂಸ್ಥೆ (ಎನ್‌ಎಂಎಎಂಐಟಿ)ಯು ಬ್ಯಾಚುಲರ್ ಆಫ್ ಇಂಜಿನಿಯರಿಂಗ್(ಬಿ.ಇ.) ಮಾಡಲಿಚ್ಛಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಯೋಜನೆಯನ್ನು ಘೋಷಿಸಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸರಾಸರಿ 85 ಶೇ. ಅಂಕಗಳನ್ನು ಗಳಿಸಿ ಬಿಇ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 25 ರಿಯಾಯಿತಿ ಇರುತ್ತದೆ. ಅಧ್ಯಯನದ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ಉತ್ತಮ ಶಿಸ್ತು ಮತ್ತು ಶೈಕ್ಷಣಿಕ ಸಾಧನೆ (ಸೆಮಿಸ್ಟರ್/ವಾರ್ಷಿಕ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾದರೆ) ತೋರಿದರೆ ಈ ಸೌಲಭ್ಯ ಮುಂದುವರಿಯಲಿದೆ.

ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ ಶಾಖೆಯ ಅರ್ಹ ವಿದ್ಯಾರ್ಥಿಗಳಿಗೆ ಕಾಮೆಡ್ ಕೆ ಶುಲ್ಕಕ್ಕಿಂತ 40 ಸಾವಿರ ರೂ. ಕಡಿಮೆ ಶುಲ್ಕ ವಿಧಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಶುಲ್ಕ ವಿನಾಯಿತಿಯ ವಿವರ ಇಂತಿವೆ.

ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್/ಮೆಕ್ಯಾನಿಕಲ್/ ಇನ್ಫಾರ್ಮೇಷನ್ ಸೈನ್ಸ್
ವಾರ್ಷಿಕ 2.83 ಲಕ್ಷ ರೂ.(ಸಾಮಾನ್ಯ ಶುಲ್ಕ), ವಾರ್ಷಿಕ 2.13 ಲಕ್ಷ ರೂ. (ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ)

ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಸಿವಿಲ್
ವಾರ್ಷಿಕ 1.93 ಲಕ್ಷ ರೂ. ( ಸಾಮಾನ್ಯ ಶುಲ್ಕ), ವಾರ್ಷಿಕ 1.53 ಲಕ್ಷ ರೂ. ( ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ)

ಬಯೋ ಟೆಕ್ನಾಲಜಿ
ವಾರ್ಷಿಕ 1.03 ಲಕ್ಷ ರೂ. ( ಸಾಮಾನ್ಯ ಶುಲ್ಕ), ವಾರ್ಷಿಕ 78 ಸಾವಿರ ರೂ. ( ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News