×
Ad

ಪೊಲೀಸರು ಸಂಗ್ರಹಿಸಿದ್ದ 50 ಲೋಡ್ ಮರಳು ನಾಪತ್ತೆ

Update: 2017-06-07 20:22 IST

ಮಂಜೇಶ್ವರ, ಜೂ.77: ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಮತ್ತು ಮರಳುಗಾರಿಕೆ ಕೇಂದ್ರಗಳಿಂದ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ 50 ಲೋಡ್ ಮರಳು ನಾಪತ್ತೆಯಾಗಿದೆ.

ಮಂಜೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡ 100 ಲೋಡ್ ಮರಳು ಪೈಕಿ 50 ಲೋಡ್ ಮರಳು ನಾಪತ್ತೆಯಾಗಿರುವುದಾಗಿ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ಕಟ್ಟಡಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News