×
Ad

ದುರಂತಗಳ ನಿರ್ವಹಣೆ: ತುರ್ತು ತಂಡ ರಚನೆ

Update: 2017-06-07 20:44 IST

ಮಂಗಳೂರು, ಜೂ.7: ಮಂಗಳೂರು ತಾಲೂಕಿನಲ್ಲಿ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ದುರಂತಗಳು ಸಂಭವಿಸಿದರೆ ಅದರ ನಿರ್ವಹಣೆ ಹಾಗೂ ದುರಂತದ ತೀವ್ರತೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತುರ್ತು ನಿರ್ವಹಣಾ ತಂಡವನ್ನು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ರಚಿಸಿದ್ದಾರೆ.

ಮಂಗಳೂರು ಸಹಾಯಕ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹೋಂಗಾರ್ಡ್ ಕಮಾಂಡೆಂಟ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು, ಕರಾವಳಿ ಪೊಲೀಸ್ ಪಡೆ ಡಿವೈಎಸ್ಪಿ, ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರರು, ಕೋಸ್ಟ್‌ಗಾರ್ಡ್ ಕಮಾಂಡೆಂಟ್, ಮಂಗಳೂರು ತಹಶೀಲ್ದಾರ್ ಹಾಗೂ ಎನ್‌ಐಟಿಕೆಯ ತಜ್ಞ ಪ್ರೊ. ಶ್ರೀನಿಕೇತನ್ ಅವರು ಈ ತಂಡದಲ್ಲಿದ್ದಾರೆ.

ಈ ತಂಡವು ದುರಂತ ಸಂಭವಿಸಿದ ಅರ್ಧ ಗಂಟೆಯೊಳಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ತುರ್ತು ವಿಶ್ಲೇಷಣೆ ಮಾಡಿ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಿದೆ. ಇದಲ್ಲದೆ ಜಿಲ್ಲಾಡಳಿದ ನೆರವಿನೊಂದಿಗೆ ದುರಂತ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಹಾಗೂ ಸಂಪನ್ಮೂಲಗಳನ್ನು ಕ್ರೋಢೀಕರಿಸಲಿದೆ. ಈ ತಂಡಕ್ಕೆ ಎಲ್ಲಾ ಸರಕಾರಿ ಇಲಾಖೆ, ಅಧಿಕಾರಿಗಳು, ಸರಕಾರಿ ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಈ ತಂಡಕ್ಕೆ ಸಂಬಂಧಿಸಿದ ಎಲ್ಲಾ ಖರ್ಚು-ವೆಚ್ಚಗಳನ್ನು ವಿಕೋಪ ಪರಿಹಾರ ನಿಧಿಯಿಂದ ವೆಚ್ಚ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News