ಬಾಬರಿ ಧ್ವಂಸ ಪ್ರಕರಣ: ಅಡ್ವಾಣಿ,ಜೋಶಿ,ಉಮಾಭಾರತಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ
Update: 2017-06-07 21:12 IST
ಲಕ್ನೋ,ಜೂ.7: ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಇಲ್ಲಿಯ ವಿಶೇಷ ನ್ಯಾಯಾಲಯವು ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ಅವರ ವಯಸ್ಸನ್ನು ಪರಿಗಣಿಸಿ ವಿಚಾರಣೆಯ ಅವಧಿಯಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿಯನ್ನು ನೀಡಿ ಬುಧವಾರ ಆದೇಶಿಸಿದೆ.
ಇನ್ನೋರ್ವ ಆರೋಪಿ, ಕೇಂದ್ರ ಸಚಿವೆ ಉಮಾಭಾರತಿಯವ ರಿಗೂ ಅವರ ಕಾರ್ಯಭಾರವನ್ನು ಪರಿಗಣಿಸಿ ನ್ಯಾಯಾಲಯವು ಈ ವಿನಾಯಿತಿಯನ್ನು ನೀಡಿದೆ. ಬಾಬರಿ ಮಸೀದಿ ಧ್ವಂಸದಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಈ ಮೂವರೂ ನಾಯಕರು ಮತ್ತು ಹಿರಿಯ ಬಿಜೆಪಿ ನಾಯಕ ವಿನಯ ಕಟಿಯಾರ್, ಸಾಧ್ವಿ ಋತಂಬರಾ ಮತ್ತು ವಿಹಿಂಪ ನಾಯಕ ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ಧ ನ್ಯಾಯಾಲಯವು ಕೆಲವು ದಿನಗಳ ಹಿಂದೆ ಕ್ರಿಮಿನಲ್ ಒಳಸಂಚು ಆರೋಪಗಳನ್ನು ರೂಪಿಸಿತ್ತು.