ಆರ್‌ಬಿಐ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ಸಾಲದರಗಳಲ್ಲಿ ಯಥಾಸ್ಥಿತಿ,ಎಸ್‌ಎಲ್‌ಆರ್ ಕಡಿತ

Update: 2017-06-07 16:54 GMT

ಮುಂಬೈ,ಜೂ.7: ಬಹು ನಿರೀಕ್ಷಿತ ಕ್ರಮವೊಂದರಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯು ಬುಧವಾರ ಪ್ರಕಟಿಸಿದ ಈ ವರ್ಷದ ತನ್ನ ಎರಡನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಮುಖ್ಯ ಸಾಲದರಗಳಲಿ ಯಾವುದೇ ಬದಲಾವಣೆ ಗಳನ್ನು ಮಾಡಲಾಗಿಲ್ಲ. ರೆಪೋ ದರವನ್ನು ಶೇ.6.25 ಮತ್ತು ರಿವರ್ಸ್ ರೆಪೋ ದರವನ್ನು ಶೇ.6ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ಆದರೆ ಆರ್ಥಿಕತೆಯಲ್ಲಿ ನಗದು ಹರಿವನ್ನು ಹೆಚ್ಚಿಸಲು ಬ್ಯಾಂಕುಗಳ ಶಾಸನಾತ್ಮಕ ನಗದು ಅನುಪಾತ(ಎಸ್‌ಎಲ್‌ಆರ್)ವನ್ನು ಮೊದಲಿನ ಶೇ.20.5ರಿಂದ ಶೇ.20ಕ್ಕೆ ಇಳಿಸಲಾಗಿದೆ.

ಸ್ಥಾಪನೆಯಾದಾಗಿನಿಂದಲೂ ಸರ್ವಾನುಮತದ ಅಭಿಪ್ರಾಯವನ್ನೇ ತಳೆಯುತ್ತ ಬಂದಿರುವ ಎಂಪಿಸಿ ಪಾಲಿಸಿ ದರಗಳನ್ನು ನಿರ್ಧರಿಸುವಾಗ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತದೆ. ಸಮಿತಿಯ ಐವರು ಸದಸ್ಯರು ಸಾಲದರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಒಲವು ಹೊಂದಿದ್ದರೆ ಇನ್ನೋರ್ವ ಸದಸ್ಯ ರವೀಂದ್ರ ಎಚ್. ಧೋಲಾಕಿಯಾ ಅವರು ಇದಕ್ಕೆ ವಿರುದ್ಧವಾದ ನಿಲುವು ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News