ಉಡುಪಿ ಚರ್ಚ್‌ನ ನೂತನ ಧರ್ಮಗುರುಗಳ ಅಧಿಕಾರ ಸ್ವೀಕಾರ
ಉಡುಪಿ, ಜೂ.7: ಉಡುಪಿ ಶೋಕಮಾತಾ ಇಗರ್ಜಿಯ ನೂತನ ಧರ್ಮ ಗುರುವಾಗಿ ಧರ್ಮಪ್ರಾಂತದ ಕುಲಪತಿಗಳು ಹಾಗೂ ಬಾರಕೂರು ಚರ್ಚಿನ ಧರ್ಮಗುರುಗಳಾಗಿದ್ದ ವಂದನೀಯ ವಲೇರಿಯನ್ ಮೆಂಡೊನ್ಸಾ ಬುಧವಾರ ಅಧಿಕಾರ ಸ್ವೀಕರಿಸಿದರು.
ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಧರ್ಮಗುರು, ಧರ್ಮಾಧ್ಯಕ್ಷರ ಪ್ರತಿನಿಧಿ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ ಮಿನೇಜಸ್ ನೇತೃತ್ವದಲ್ಲಿ ಅಧಿಕಾರ ಸ್ವೀಕಾರದ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಚರ್ಚಿನ ನಿರ್ಗಮಿತ ಧರ್ಮಗುರು ವಂ. ಫ್ರೆಡ್ ಮಸ್ಕರೇನ್ಹಸ್ ನೂತನ ಧರ್ಮಗುರುಗಳಿಗೆ ಚರ್ಚಿನ ಅಧಿಕಾರ ವನ್ನು ಹಸ್ತಾಂತರಿಸಿದರು. ಈ ವೇಳೆ ನೂತನ ಧರ್ಮಗುರು ಗೌಪ್ಯತೆಯ ಪ್ರಮಾಣವನ್ನು ಮಾಡಿದರು.
ಉಡುಪಿ ಕೆಥೊಲಿಕ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ವಂ.ಡಾ. ಲಾರೆನ್ಸ್ ಡಿಸೋಜ, ತೊಟ್ಟಂ ಚರ್ಚಿನ ಧರ್ಮಗುರು ವಂ.ಫ್ರಾನ್ಸಿಸ್ ಕರ್ನೆಲಿಯೊ, ಮಣಿಪಾಲ ಚರ್ಚಿನ ವಂ.ಫ್ರೆಡ್ರಿಕ್ ಡಿಸೋಜ, ಬಾರ್ಕೂರು ಚರ್ಚಿನ ನೂತನ ಧರ್ಮಗುರು ವಂ.ಫಿಲಿಪ್ ನೇರಿ ಆರಾನ್ಹಾ, ಉಡುಪಿ ಚರ್ಚಿನ ಸಹಾಯಕ ಧರ್ಮಗುರು ವಂ ರೋಯ್ಸನ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಇರ್ವಿನ್ ಆಳ್ವಾ, ಕಾರ್ಯದರ್ಶಿ ಗ್ರೇಶನ್ ಭುತೆಲ್ಲೊ ಮೊದ ಲಾದವರು ಉಪಸ್ಥಿತರಿದ್ದರು.