ವೃತ್ತಿಪರ ಕೌಶಲ್ಯ ತರಬೇತಿ
ಮಂಗಳೂರು, ಜೂ. 7: ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆ ಮಂತ್ರಾಲಯದಿಂದ ಪ್ರಾಯೋಜಿತ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮದಿಂದ ಅನುದಾನಿತ, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಯೋಜನೆಯಡಿಯಲ್ಲಿ ಅಸಿಸ್ಟೆಂಟ್ ಎಲೆಕ್ಟ್ರಿಶಿಯನ್, ಫುಡ್ ಆ್ಯಂಡ್ ಬೆವೆರೇಜಸ್, ರಿಟೇಲ್, ಡೊಮೆಸ್ಟಿಕ್ ಐಟಿ ಹೆಲ್ಪ್‌ಡೆಸ್ಕ್ ಅಡೆಂಟೆಂಟ್, ಫೀಲ್ಡ್ ಟೆಕ್ನೀಶಿಯನ್-ಹೋಂ ಅಪ್ಲೈನ್ಸಸ್ ತರಬೇತಿಗಳನ್ನು ನೀಡಲಾಗುವುದು.
ವಯೋಮಿತಿ 18 ವರ್ಷದಿಂದ ಮೇಲ್ಪಟ್ಟು 35 ವರ್ಷದೊಳಗಿರಬೇಕು. ತರಬೇತಿಯು ಎರಡು ತಿಂಗಳ ಅವಧಿಯದ್ದಾಗಿದೆ. ಅಸಿಸ್ಟೆಂಟ್ ಎಲೆಕ್ಟ್ರಿಶಿಯನ್, ಫುಡ್ ಆ್ಯಂಡ್ ಬೆವೆರೇಜಸ್, ರಿಟೇಲ್ ತರಬೇತಿಗೆ 10ನೆ ತರಗತಿ, ಡೊಮೆಸ್ಟಿಕ್ ಐಟಿ ಹೆಲ್ಪ್‌ಡೆಸ್ಕ್ ಅಡೆಂಟೆಂಟ್ ತರಬೇತಿಗೆ 12ನೆ ತರಗತಿ, ಫೀಲ್ಡ್ ಟೆಕ್ನೀಶಿಯನ್-ಹೋಂ ಅಪ್ಲೈನ್ಸಸ್ ತರಬೇತಿಗೆ 8ನೆ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ಎಕ್ಸೆಲೆಸ್ ಲರ್ನಿಂಗ್ ಸಲ್ಯೂಶನ್ಸ್ ಪ್ರೈ.ಲಿ., ಅನಂತ್ ಆರ್ಕೆಡ್, ಮೊದಲ ಮಹಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಕಾವೂರು ವೃತ್ತ, ಕಾವೂರು ಅಥವಾ ಮೊಬೈಲ್: 7795655840, ದೂ.ವಾ. 0824-2984849 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.