×
Ad

ಸೂಕ್ತ ಭದ್ರತೆಗೆ ಆಗ್ರಹಿಸಿ ಮನವಿ

Update: 2017-06-07 21:42 IST

ಉಳ್ಳಾಲ, ಜೂ. 7: ರಮಝಾನ್ ತಿಂಗಳ ಅವಧಿಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನೂಕೂಲವಾಗುವ ದೃಷ್ಟಿಯಲ್ಲಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಎಲ್ಲಾ ಮಳಿಗೆಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಜೂನ್ ತಿಂಗಳಿನಲ್ಲಿ ಗ್ರಾಹಕರ ಅನೂಕೂಲಕ್ಕಾಗಿ ಅಂಗಡಿ, ಮಳಿಗೆಗಳನ್ನು ಆದಷ್ಟು ತಡರಾತ್ರಿಯವರೆಗೆ ತೆರೆದಿಟ್ಟು ವ್ಯಾಪಾರ ವಹಿವಾಟುಗಳನ್ನು ನಡೆಸಲು ಅನುಮತಿ ನೀಡುವಂತೆ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ಟ್ರೇಡ್ ಅಸೋಶಿಯೇಶನ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿಯನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News