ನಾಗಾಲ್ಯಾಂಡ್: ಎನ್‌ಕೌಂಟರ್‌ಗೆ ಮೂವರು ಬಲಿ

Update: 2017-06-07 16:17 GMT

ಕೊಹಿಮ, ಜೂ.7: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಲಪ್ಪಾ ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ನಾಗಾ ಸಂಘಟನೆ ‘ದಿ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್(ಎನ್‌ಎಸ್‌ಸಿಎನ್-ಕೆ) ನ ಮೂವರು ಸದಸ್ಯರು ಹತರಾಗಿದ್ದಾರೆ. ಘಟನೆಯಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಅಧಿಕಾರಿ ಮೃತಪಟ್ಟಿದ್ದು ಅಸ್ಸಾಂ ರೈಫಲ್ಸ್‌ನ ಮೂವರು ಯೋಧರು ಗಾಯಗೊಂಡಿರುವುದಾಗಿ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 11:00 ಗಂಟೆ ವೇಳೆಗೆ ಲಪ್ಪಾ ಪ್ರದೇಶದ ಟಿಝಿಟ್ ವೃತ್ತದ ಬಳಿ ಎನ್‌ಎಸ್‌ಸಿಎನ್-ಕೆ ಸಂಘಟನೆಯ ಸದಸ್ಯರು ಸುಳಿದಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಸ್ಸಾಂ ರೈಫಲ್ಸ್ ಪಡೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಈ ವೇಳೆ ಎರಡೂ ತಂಡಗಳ ಮಧ್ಯೆ ತೀವ್ರ ಗುಂಡಿನ ದಾಳಿ ನಡೆ ಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News