×
Ad

ಕಾರ್ಕಳ : ರಾಷ್ಟ್ರಮಟ್ಟದ ಕಲಾ ಕಾರ್ಯಾಗಾರ

Update: 2017-06-07 21:58 IST

ಮಾಳ (ಕಾರ್ಕಳ), ಜೂ.7: ಹೊಸದಿಲ್ಲಿಯ ಗ್ಯಾಲರಿ ಇಸ್ಪೇಸ್ ಹಾಗು ಕಲಾವಿದರಾದ ಮಂಜುನಾಥ ಕಾಮತ್ ಮತ್ತು ಪುರುಷೋತ್ತಮ ಅಡ್ವೆ ಅವರು ಜಂಟಿಯಾಗಿ ಸಂಯೋಜಿಸಿದ ದಿ.ವಿಜಯನಾಥ ಶೆಣೈ ನೆನಪಿನ ‘ವಿಶ್ವರೂಪ -ದ ಕಾಸ್ಮಿಕ್ ಫಾರ್ಮ್’ ರಾಷ್ಟ್ರಮಟ್ಟದ ಕಲಾ ಕಾರ್ಯಾಗಾರ ಕಾರ್ಕಳ ತಾಲೂಕು ಮಾಳದ ಮಣ್ಣಪಾಪು ಮನೆಯಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ವಿಶ್ವರೂಪದ ಸಮಕಾಲೀನ ಪ್ರಸ್ತುತಿಯ ಬಗೆಗೆ ಕಲಾವಿದ ಮಂಜುನಾಥ ಕಾಮತ್ ಬೇರೆ ಬೇರೆ ಕಾಲಘಟ್ಟದ ಕಲಾಕೃತಿಗಳ ಸ್ಲೈಡ್‌ಗಳನ್ನು ಪ್ರದರ್ಶಿಸಿ ಕಲಾಕಾರರೊಂದಿಗೆ ಸಂವಾದ ನಡೆಸಿದರು.

 ಆರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ಕಲಾವಿದರಾದ ಮಹಾರಾಷ್ಟ್ರದ ಚೇತನ್ ಪರಶುರಾಮ್, ಬೆಂಗಳೂರಿನ ಡುಂಡಿರಾಜ್ ಹಾಗೂ ರಾಮಮೂರ್ತಿ,ಒರಿಸ್ಸಾದ ಹರಿಹರ ಮಹಾರಾಣಾ ಮತ್ತು ಶ್ರೀಧರ್ ನಾಯಕ್, ಅಹಮದಾಬಾದ್‌ನ ಜಗದೀಶ್ ವಾಗಿ, ಕುಂದಾಪುರದ ಕೃಷ್ಣ ಗುಡಿಗಾರ, ಮೈಸೂರಿನ ಮನೀಶ್ ವರ್ಮಾ ಮತ್ತು ಶ್ರೀಧರ್ ರಾವ್, ಟಂಕಾ ಕಲಾವಿದ ನಾಮ್‌ಗ್ಯಾಲ್, ಕಾಳಹಸ್ತಿಯ ನಿರಂಜನ ಚೆಟ್ಟಿ, ಬರೋಡದ ಓಂಪ್ರಕಾಶ್, ಭೋಪಾಲ್‌ನ ಪ್ರದೀಪ್ ಮಾರಾವಿ, ಕೇರಳದ ಪ್ರತೀಶ್ ಸಿ.ವಿ., ಪ.ಬಂಗಾಳದ ರಹೀಮ್ ಚಿತ್ರಕಾರ್, ಉದಯಪುರದ ವಿಜಯ ಜೋಷಿ ಮತ್ತು ರಾಜಾರಾಂ ಶರ್ಮಾ, ಬಿಹಾರದ ಶ್ರವಣ್ ಪಾಸ್ವಾನ್, ಗುಲ್ಬರ್ಗಾದ ವಿಜಯ ಹಾಗರಗುಂಡಿ ಮೊದಲಾದವರು ಕಲಾಕೃತಿಗಳನ್ನು ರಚಿಸಲಿದ್ದಾರೆ ಎಂದು ಶಿಬಿರದ ಸಂಯೋಜಕ, ಕಲಾವಿದ ಪುರುಷೋತ್ತಮ ಅಡ್ವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News