×
Ad

ಸಿದ್ಧಾಂತ, ಕಾರ್ಯ ಪದ್ಧತಿ ಕಾರ್ಯಕರ್ತರ ಜೀವಾಳ: ನಳಿನ್ ಕುಮಾರ್ ಕಟೀಲ್

Update: 2017-06-07 22:06 IST

ಉಡುಪಿ,ಜೂ.7:ಸಿದ್ಧಾಂತ, ಕಾರ್ಯ ಪದ್ಧತಿ ಕಾರ್ಯಕರ್ತರ ಜೀವಾಳ:ಕಟೀಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಸ್ತಾರಕರನ್ನು ಹೊರಡಿಸುವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಸ್ತಾರಕರನ್ನು ಹೊರಡಿಸುವ ಪೂರ್ವಾವಿಸಿದ್ಧತಾಸೆಯಲ್ಲಿ ಅವರು ಮಾತನಾಡುತಿದ್ದರು. ಪಕ್ಷಕ್ಕಾಗಿ ಪೂರ್ಣಾವಧಿ ಕೆಲಸ ಮಾಡುವ ವಿಸ್ತಾರಕ ಯೋಜನೆಯ ಪರಿಕಲ್ಪನೆ ಸಂಘಟನೆಯ ಆತ್ಮ ಎಂದು ಹೇಳಿದ ಅವರು, ಒಂದು ವರ್ಷ ಪೂರ್ತಿ, ಆರು ತಿಂಗಳು ಅಥವಾ 15 ದಿನಗಳ ಕಾಲ ಪಕ್ಷದ ಕೆಲಸಕ್ಕಾಗಿ ಸಮಯ ಕೊಡಲು ಬದ್ಧರಾಗಿರಬೇಕೆಂದರು. ಪಕ್ಷದ ಸಿದ್ಧಾಂತ, ವಿಚಾರಧಾರೆ, ಕಾರ್ಯ ಪದ್ಧತಿ ಮತ್ತು ಕಾರ್ಯಕರ್ತರ ನಡವಳಿಕೆಗಳ ಬಗ್ಗೆ ಅವರು ತಿಳಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಸ್ವಾಗತಿಸಿ, ಉಡುಪಿ ಜಿಲ್ಲೆಯಲ್ಲಿ ವಿಸ್ತಾರಕ ಯೋಜನೆಯ ಬಗ್ಗೆ ಕೈಗೊಂಡ ಕ್ರಮ ಗಳ ಕುರಿತು ಮಾಹಿತಿ ನೀಡಿದರು.

ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರ್ ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯಶ್‌ಪಾಲ್ ಸುವರ್ಣ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ಯಾಮಲಾ ಎಸ್. ಕುಂದರ್, ಕಿರಣ್ ಕುಮಾರ್ ಕೊಡ್ಗಿ, ಬಿ. ಎಂ. ಸುಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News