×
Ad

ಸ್ಕಾರ್ಫ್ ಧರಿಸಿ ಕಲಾಪ ವೀಕ್ಷಿಸಲು ವಿದ್ಯಾರ್ಥಿನಿಗೆ ನಿರಾಕರಣೆ: ಕ್ಷಮೆ ಯಾಚನೆಗೆ ಎಸ್.ಡಿ.ಪಿ.ಐ ಒತ್ತಾಯ

Update: 2017-06-07 23:39 IST

ಬೆಂಗಳೂರು, ಜೂ. 7: ಸ್ಕಾರ್ಫ್ ಧರಿಸಿ ಸದನ ಕಲಾಪ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿನಿಗೆ ಸದನ ಕಲ‌ಾಪ ವೀಕ್ಷಣೆ ನಿರಾಕರಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಘಟನೆಯು ಅತ್ಯಂತ ಖೇಧಕರವಾಗಿದೆ ಮತ್ತು  ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಿದೆ. ಘಟನೆಯ ಬಗ್ಗೆ ಸರಕಾರ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News