×
Ad

ಬಿಹಾರ ಪಾನ ನಿಷೇಧ: ಹಳೆಯ ದಾಸ್ತಾನನ್ನು ರಾಜ್ಯದ ಹೊರಗೆ ಮಾರಾಟ ಮಾಡಲು ಸುಪ್ರೀಂ ಅನುಮತಿ

Update: 2017-06-08 18:15 IST

ಹೊಸದಿಲ್ಲಿ,ಜೂ.8: ತನ್ನ ಹಿಂದಿನ ಆದೇಶವನ್ನು ಗುರುವಾರ ಪರಿಷ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು, ತಮ್ಮಲ್ಲಿರುವ 200 ಕೋ.ರೂ.ಗೂ ಅಧಿಕ ವೌಲ್ಯದ ಹಳೆಯ ಮದ್ಯದ ದಾಸ್ತಾನನ್ನು ರಾಜ್ಯದ ಹೊರಗೆ ರಫ್ತು ಮಾಡಲು ಬಿಹಾರದಲ್ಲಿಯ ಮದ್ಯ ತಯಾರಕರಿಗೆ ಜು.31ರವರೆಗೆ ಅವಕಾಶ ನೀಡಿದೆ.

ಹಳೆಯ ದಾಸ್ತಾನಿನ ನಾಶ ಮತ್ತು ಅದರ ರಫ್ತು ಹೀಗೆ ಎರಡು ವಿಷಯಗಳಿದ್ದು, ಸರ್ವೋಚ್ಚ ನ್ಯಾಯಾಲಯದ ಮೇ 29ರ ಆದೇಶವು ದಾಸ್ತಾನನ್ನು ನಾಶಗೊಳಿಸಲು ಗಡುವಿನ ಬಗ್ಗೆ ಉಲ್ಲೇಖಿಸಿದೆಯೇ ಹೊರತು ರಾಜ್ಯದಿಂದ ಹೊರಗೆ ಅದರ ರಫ್ತಿನ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಮದ್ಯ ತಯಾರಕರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

 ಈ ಹಿಂದೆ ಕಚ್ಚಾ ವಸ್ತುಗಳು ಸೇರಿದಂತೆ ದಾಸ್ತಾನು ವಿಲೇವಾರಿಗೆ ನಿತೀಶ ಕುಮಾರ ಸರಕಾರವು ವಿಧಿಸಿದ್ದ ಎ.30ರ ಗಡುವನ್ನು ಸರ್ವೋಚ್ಚ ನ್ಯಾಯಾಲಯವು ಮೇ 31ರವರೆಗೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News