×
Ad

ಪುತ್ತಿಗೆ ಸೇತುವೆ ತುರ್ತು ದುರಸ್ತಿ ಕಾಮಗಾರಿ ಪ್ರಾರಂಭ

Update: 2017-06-08 21:14 IST

ಹಿರಿಯಡ್ಕ, ಜೂ.8: ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕೊಂಡಿ ಯಂತಿದ್ದು, ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿರುವ ಪೆರ್ಡೂರು ಸಮೀಪದ ಪುತ್ತಿಗೆ ಸೇತುವೆ ತುರ್ತು ದುರಸ್ತಿ ಕಾಮಗಾರಿ ಪ್ರಾರಂಭಗೊಂಡಿದೆ.

ಸೀತಾನದಿಗೆ ಕಟ್ಟಲಾಗಿರುವ ಈ ಸೇತುವೆ ಮೇಲ್ನೋಟಕ್ಕೆ ಗಟ್ಟಿಮುಟ್ಟಾಗಿದ್ದರು ಸಹ ಕೆಳಭಾಗದಲ್ಲಿ ಕಾಂಕ್ರೀಟ್ ಬೆಡ್ ಸಂಪೂರ್ಣವಾಗಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಪತ್ರಿಕೆ ಹಾಗೂ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿದ್ದವು.

 ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ರಾಷ್ಟ್ರಿಯ ಹೆದ್ದಾರಿ ಎನ್ ಹೆಚ್ 169ಎ ಇಂಜಿನಿಯರ್ ಮಂಜುನಾಥ್ ನಾಯಕ್ ಕಾರ್ಕಳ, ಸೇತುವೆಯ ತುರ್ತು ದುರಸ್ಥಿ ಕಾಮಗಾರಿಗೆ ಚಾಲನೆ ನೀಡಿದರು.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News