ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ರಿಯಾಯಿತಿ ಬಸ್ ಪಾಸ್

Update: 2017-06-08 16:46 GMT

 ಮಂಗಳೂರು, ಜೂ.8: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗವು ಪ್ರತಿ ವರ್ಷದಂತೆ ಈ ವರ್ಷವೂ 2017-18ನೆ ಸಾಲಿಗಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ಸು ಪಾಸುಗಳನ್ನು ವಿತರಿಸಲು ವ್ಯವಸ್ಥೆ ಮಾಡಿಕೊಂಡಿದೆ. ಮೊದಲನೇ ಹಂತವಾಗಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಸ್ಸು ಪಾಸುಗಳನ್ನು ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿತರಿಸಲಾಗುವುದು.

ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಫಾರಂಗಳನ್ನು ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಯಿಂದ ದೃಢೀಕರಿಸಿ ಮಂಗಳೂರು ಬಸ್ಸು ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲ್ಲಿ ಸಲ್ಲಿಸಬೇಕು. ಶೈಕ್ಷಣಿಕ ಸಂಸ್ಥೆಯಿಂದ ಮತ್ತು ವಾಸ ಸ್ಥಳಕ್ಕೆ ಗರಿಷ್ಠ 60 ಕಿ.ಮೀ. ವರೆಗೆ ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು.

 
 2017-18ನೆ ಸಾಲಿನ ಪಾಸಿನ ದರಗಳು: 1 ರಿಂದ 7ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ, (ಸಂಸ್ಕರಣ ಶುಲ್ಕ ತಲಾ ರೂ: 80 ಹಾಗೂ ಅಪಘಾತ ಪರಿಹಾರ ಶುಲ್ಕ ರೂ. 50) -ರೂ.130, ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ -ರೂ. 600, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ರೂ. 400, ಕಾಲೇಜು /ಡಿಪ್ಲೊಮಾ ವಿದ್ಯಾರ್ಥಿಗಳಿಗೆ- 10 ತಿಂಗಳಿಗೆ ರೂ.900, ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ ರೂ. 1150, ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ ಎಂಜಿನಿಯರಿಂಗ್ ಇತರ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 1400, ಸಂಜೆ ಕಾಲೇಜು, ಪಿ ಎಚ್ ಡಿ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 1200.
    ಸಂಸ್ಕರಣ ಶುಲ್ಕ ತಲಾ ರೂ. 80, ಅಪಘಾತ ಪರಿಹಾರ ಶುಲ್ಕ ರೂ. 50ನ್ನು ನೀಡುವುದು. ಅಲ್ಲದೆ ಪ್ರಸ್ತುತ ವರ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಪಾಸು ನೀಡಲಾಗುವುದು. ( ಸಂಸ್ಕರಣ ಶುಲ್ಕ+ ಅಪಘಾತ ಪರಿಹಾರ ಶುಲ್ಕ ಒಟ್ಟು ರೂ: 130 ಪಾವತಿಸಬೇಕು) ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News