ಕೌಟುಂಬಿಕ ಸಮಸ್ಯೆ: ಯುವಕ ಆತ್ಮಹತ್ಯೆ
Update: 2017-06-08 22:25 IST
ಶಂಕರನಾರಾಯಣ, ಜೂ.7: ಕೌಟುಂಬಿಕ ಸಮಸ್ಯೆ ಹಾಗೂ ವಿಪರೀತ ಕುಡಿಯುವ ಚಟ ಹೊಂದಿದ್ದ ಅಂಪಾರುವಿನ ಕಿರಣ್ ನಾಯ್ಕ(28) ಎಂಬವರು ಜೂ.7ರಂದು ರಾತ್ರಿ ಮನೆ ಸಮೀಪದ ಗೇರು ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕಿರಣ್ ನಾಯ್ಕ ಹೊಟೇಲುಗಳಿಗೆ ಪರೋಟ ಸರಬರಾಜು ಮಾಡುತಿದ್ದ. ಕುಡಿತದ ಚಟ ಹೊಂದಿದ್ದ ಈತ ನಿನ್ನೆ ರಾತ್ರಿ ಪತ್ನಿಯೊಂದಿಗೆ ಜಗಳವಾಡಿ ಬಳಿಕ ಮನೆಯ ಸಮೀಪದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.