×
Ad

ಪರಿಸರ ಇಲಾಖೆಯಿಂದ ಧರ್ತಿ ಕಂಪೆನಿಗೆ ನೋಟಿಸ್‌

Update: 2017-06-08 22:29 IST

ಮಂಗಳೂರು, ಜೂ. 8: ದುರಂತಕ್ಕೀಡಾಗಿ ಸಮುದ್ರದಲ್ಲಿರುವ ಬಾರ್ಜ್‌ಗೆ ಸಂಬಂಧಿಸಿ ಪರಿಸರ ಇಲಾಖೆಯು ಗುರುವಾರ ಧರ್ತಿ ಕಂಪೆನಿಗೆ ನೋಟಿಸ್ ಜಾರಿ ಮಾಡಿದೆ.

ಬಾರ್ಜ್‌ನಿಂದ ಇಂಧನ ಖಾಲಿ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದ ಹೊರತಾಗಿಯೂ ಪರಿಸರ ಇಲಾಖೆಯು ಇಂದು ಧರ್ತಿ ಕಂಪೆನಿಗೆ ನೋಟಿಸ್ ನೀಡಿ ಬಾರ್ಜ್‌ನಿಂದ ಇಂಧನ ಸೋರಿಕೆಯಾದರೆ ಜಲ ಮಾಲಿನ್ಯವಾಗುವ ಸಾಧ್ಯತೆ ಇದ್ದು, ಹೀಗೇನಾದರೂ ಆಗಿದ್ದಲ್ಲಿ ಇದಕ್ಕೆ ಧರ್ತಿ ಕಂಪೆನಿಯನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News