×
Ad

ಪೋಷಕರು ಐಫೋನ್ ಖರೀದಿಸಿಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿದ ಬಾಲಕ

Update: 2017-06-08 23:07 IST

ಬಿಹಾರ, ಜೂ.8: ಪೋಷಕರು ಆ್ಯಪಲ್ ಐಫೋನ್ ತೆಗೆದುಕೊಡದ ಕಾರಣ ಮನನೊಂದ 14 ವರ್ಷದ ಬಾಲಕನೋರ್ವ ಆತ್ಮಹತ್ಯೆಗೈದ ಘಟನೆ ದಕ್ಷಿಣ ಕೇಂದ್ರ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.

ಬಾಲಕನ ತಾಯಿಗೆ ಕೋಣೆಗೆ ತೆರಳಿದ್ದ ಸಂದರ್ಭ ಬಾಲಕ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಕಳೆದ ತಿಂಗಳು ಬಾಲಕನ ಪೋಷಕರು ಆತನಿಗೆ 8 ಸಾವಿರ ರೂ. ಮೌಲ್ಯದ ಮೊಬೈಲ್ ಫೋನೊಂದನ್ನು ತೆಗೆದುಕೊಟ್ಟಿದ್ದರು. ಆದರೆ ಆತ ಆ್ಯಪಲ್ ಐಫೋನ್ ಬೇಕೆಂದು ಹಠ ಹಿಡಿದಿದ್ದ. ರಸ್ತೆಬದಿಯಲ್ಲಿ ಹಣ್ಣು ಮಾರಾಟ ವ್ಯಾಪಾರ ಮಾಡುತ್ತಿದ್ದ ತಂದೆಗೆ ದುಬಾರಿ ಫೋನ್ ಖರೀದಿಸುವಷ್ಟು ಹಣವಿರಲಿಲ್ಲ. ಬುಧವಾರ ಶಾಲೆಯ ಬ್ಯಾಗ್ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದಾಗ ಮತ್ತೊಮ್ಮೆ ಬಾಲಕ ಐಫೋನ್ ಖರೀದಿಸುವಂತೆ ಹೇಳಿದ್ದ. ಆತನಿಗೆ 17 ವರ್ಷವಾದ ಬಳಿಕ ಫೋನ್ ಖರೀದಿಸಿಕೊಡುವುದಾಗಿ ಪೋಷಕರು ಸಮಾಧಾನ ಪಡಿಸಿ ಮನೆಗೆ ಕರೆತಂದಿದ್ದರು. ಆದರೆ ಇದರಿಂದ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಾಲಕನ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News