ಹೊಸ ಚಿಂತನೆ, ಸಂಶೋಧನೆ ದೇಶದ ಅಭಿವೃದಿ್ಧ ಗೆ ಅನಿವಾರ್ಯ: ಕೇಂದ್ರ ಸಚಿವ ಜಾವಡೇಕರ್

Update: 2017-06-08 18:14 GMT

 ಕಾಸರಗೋಡು, ಜೂ.8: ಹೊಸ ಚಿಂತನೆ ಮತ್ತು ಸಂಶೋಧನೆಗಳು ದೇಶದ ಅಭಿ ವೃದ್ಧಿಗೆ ಅನಿವಾರ್ಯ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಪೆರಿಯದಲ್ಲಿ ಕೇಂದ್ರ ವಿಶ್ವವಿದ್ಯಾನಿಲ ಯದ ಎರಡನೆ ಪದವಿ ಪ್ರಧಾನ ಸಮಾರಂಭ ವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

 ದೇಶದ 20 ವಿಶ್ವವಿದ್ಯಾನಿಲಯ ಗಳಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟ ಕ್ಕೇರಿಸಲಾಗುವುದು. ಹತ್ತು ಸಾರ್ವಜನಿಕ ವಲಯ ಮತ್ತು ಹತ್ತು ಖಾಸಗಿ ವಲಯದಲ್ಲಿದೆ ಎಂದವರು ತಿಳಿಸಿದರು.

ಕೇಂದ್ರ ವಿಶ್ವವಿದ್ಯಾನಿಲಯ ಕುಲಪತಿ ಡಾ. ವೀರೇಂದ್ರ ಲಾಲ್ ಚೋಪ್ರಾ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ. ಕರುಣಾಕರನ್, ಕೇಂದ್ರ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಜಿ. ಗೋಪಕುಮಾರ್, ರಿಜಿಸ್ಟ್ರಾರ್ ಎ. ರಾಧಾಕೃಷ್ಣನ್ ನಾಯರ್, ಪರೀಕ್ಷಾ ನಿಯಂತ್ರಣಾಧಿಕಾರಿ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಸಚಿವರಿಗೆ ಕರಿ ಬಾವುಟ ಪ್ರದರ್ಶನ

ವಿವಿ ಪದವಿ ಪ್ರಧಾನ ಸಮಾರಂಭದಲ್ಲಿ ಸಚಿವರು ಭಾಷಣ ಮಾಡುತ್ತಿದ್ದಾಗ 25ಕ್ಕೂ ಅಧಿಕ ಡಿವೈಎಫ್‌ಐ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಚಿವರತ್ತ ಕಪ್ಪು ಬಾವುಟ ಪ್ರದರ್ಶಿಸಿದರು.

ಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮೇಲೆ ಹಲ್ಲೆಗೆ ಯತ್ನಿಸಿದ ಆರೆಸ್ಸೆಸ್ ಗೂಂಡಾಗಿರಿಯನ್ನು ಖಂಡಿಸಿ ಡಿವೈಎಫ್‌ಐ ಈ ಪ್ರತಿಭಟನೆ ನಡೆಸಿದೆ.

 ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ ಬಳಿಕ ಕೇಂದ್ರ ಸಚಿವರು ಭಾಷಣ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News