ಟ್ರಂಪ್, ಒಬಾಮ, ಮರ್ಕೆಲ್, ಎರ್ದೋಗಾನ್...: ನಿರಾಶ್ರಿತರ ಪಟ್ಟಿಯಲ್ಲಿ ವಿಶ್ವ ನಾಯಕರನ್ನು ನೋಡಿ

Update: 2017-06-09 11:45 GMT

ಬ್ರಸ್ಸೆಲ್ಸ್, ಜೂ.9 : ವಿಶ್ವ ನಾಯಕರನ್ನು ನಿರಾಶ್ರಿತ ಪಟ್ಟಿಯಲ್ಲಿರುವಂತೆ ತೋರಿಸಿ ಸರಣಿ ಕಲಾಕೃತಿಗಳನ್ನು ಸಿರಿಯನ್ ನಿರಾಶ್ರಿತ ಕಲಾವಿದನೊಬ್ಬ 19 ತಿಂಗಳು ಶ್ರಮವಹಿಸಿ ರಚಿಸಿದ್ದಾನೆ. ಈ ಕಲಾಕೃತಿಗಳನ್ನು ದುಬೈ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ.

ಅಬ್ದುಲ್ಲಾ ಅಲ್ ಒಮರಿ ಎಂಬ ಕಲಾವಿದನ ‘ವಲ್ನರೆಬಿಲಿಟಿ ಸೀರೀಸ್’ ಕಲಾಕೃತಿಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿದ್ದೆಯಲ್ಲಿರುವ ಮಗುವನ್ನು ಕೈಯ್ಯಲ್ಲಿ ಹಿಡಿದುಕೊಂಡ ನಿರಾಶ್ರಿತನಂತೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭಿಕ್ಷುಕನಂತೆ ಕಾಣಿಸಲಾಗಿದೆ. ಮಾಜಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಮಾಜಿ ಇರಾನ್ ಅಧ್ಯಕ್ಷ ಮೊಹಮುದ್ ಅಹ್ಮದಿನೆಜದ್ ಅವರನ್ನೂ ಕಲಾಕೃತಿಗಳಲ್ಲಿ ತೋರಿಸಲಾಗಿದೆ.

‘‘ನನ್ನ ಕೋಪವನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಈ ಖ್ಯಾತನಾಮರನ್ನು ಅವರ ಅಧಿಕಾರದಿಂದ ಹೊರಗೆ ತೋರಿಸುವ ಪ್ರಯತ್ನಗಳನ್ನು ಮಾಡಲಾಗಿದೆ’’ ಎಂದು ಕಲಾವಿದ ವಿವರಿಸಿದ್ದಾನೆ.

ಸಿರಿಯಾದ ನಾಗರಿಕ ಯುದ್ಧ ಆರಂಭಗೊಳ್ಳುವ ಸಮಯದಲ್ಲಿ ಅವರು ಚಿತ್ರಕಾರನಾಗಿ ತಮ್ಮ ವೃತ್ತಿಯನ್ನು 2011ರಲ್ಲಿ ಆರಂಭಿಸಿದ್ದರು. ಅವರು ಸಿರಿಯಾ ತೊರೆದ ನಂತರ ಬೆಲ್ಜಿಯಂ ಅವರಿಗೆ ಆಶ್ರಯ ಒದಗಿಸಿತ್ತು. ನಿರಾಶ್ರಿತರ ಸಮಸ್ಯೆಯನ್ನು ಮನದಟ್ಟು ಮಾಡುವಲ್ಲಿ ಖ್ಯಾತನಾಮರ ಕಲಾಕೃತಿಗಳನ್ನು ಮನಮುಟ್ಟುವಂತೆ ಕಲಾವಿದ ರಚಿಸಿದ್ದಾನೆಂದು ಗ್ಯಾಲರಿಗೆ ಭೇಟಿ ನೀಡಿದ ಹಲವರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News