ಮೂವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸೂಪರ್‌ಮಾರ್ಕೆಟ್ ಉದ್ಯೋಗಿ!
Update: 2017-06-09 18:37 IST
ಪೆನ್ಸಿಲ್ವೇನಿಯ, ಜೂ. 11: ಸೂಪರ್‌ಮಾರ್ಕೆಟ್ ಉದ್ಯೋಗಿಯೊಬ್ಬ ಗುರುವಾರ ರಾತ್ರಿ ತನ್ನ ಮೂವರು ಸಹೋದ್ಯೋಗಿಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ.
ಡಲಾಸ್ ನಿವಾಸಿ 24 ವರ್ಷದ ರ್ಯಾಂಡಿ ಸ್ಟೇರ್ ಪೆನ್ಸಿಲ್ವೇನಿಯದ ವೀಸ್ ಮಾರ್ಕೆಟ್‌ನಲ್ಲಿ ಗುರುವಾರ ಮುಂಜಾನೆ ಒಂದು ಗಂಟೆಗೆ ತನ್ನ ಸಹೋದ್ಯೋಗಿಗಳನ್ನು ಕೊಂದು ತಾನೂ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಇನ್ನೂ ಗೋಜಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಟೇರ್‌ನ ಪಾಳಿ ರಾತ್ರಿ 11 ಗಂಟೆಗೆ ಅಂಗಡಿ ಮುಚ್ಚಿದಾಗ ಆರಂಭವಾಯಿತು. ಆತ ಎರಡು ಪಿಸ್ತೂಲ್‌ಗಳಿದ್ದ ಬ್ಯಾಗನ್ನು ಕಾರಿನಿಂದ ತಂದು ಇತರ ಉದ್ಯೊಗಿಗಳು ತಪ್ಪಿಸಿಕೊಳ್ಳದಂತೆ ಹೊರಗಿನಿಂದ ಮತ್ತು ಒಳಗಿನಿಂದ ಬಾಗಿಲುಗಳನ್ನು ಹಾಕಿಕೊಂಡನು. ಬಳಿಕ ತನ್ನ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದನು.
ಆತ ತನಗೆ ತಾನು ಗುಂಡು ಹಾರಿಸಿಕೊಳ್ಳುವ ಮೊದಲು 59 ಗುಂಡುಗಳನ್ನು ಹಾರಿಸಿದನು.