ಅಕ್ರಮ ಮರಳು: 7 ಲಾರಿಗಳ ಸಹಿತ ಚಾಲಕರ ಬಂಧನ

Update: 2017-06-09 13:12 GMT

ಮಂಜೇಶ್ವರ, ಜೂ. 9: ಅನಧಿಕೃತವಾಗಿ ಮರಳು ಸಂಗ್ರಹಿಸಿ ಸಾಗಿಸುವ ದಂಧೆ ತೀವ್ರಗೊಂಡಿದ್ದು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮರಳು ಸಹಿತ 7 ಲಾರಿಗಳನ್ನು ವಶಪಡಿಸಿ ಅವುಗಳ ಚಾಲಕರನ್ನು ಬಂಧಿಸಲಾಗಿದೆ.

ಬದಿಯಡ್ಕ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಹಾಗೂ ಬೇಳದಿಂದ ಒಟ್ಟು ನಾಲ್ಕು ಲೋಡ್ ಮರಳು ವಶಪಡಿಸಲಾಗಿದೆ. ಈ ಸಂಬಂಧ ಲಾರಿಗಳ ಚಾಲಕರಾದ ಬಂಟ್ವಾಳ ನಿವಾಸಿ ಕೆ. ಖಾದರಿ ಬ್ಯಾರಿ (35), ನೀಲೇಶ್ವರ ಚಾಯೋತ್ತ್‌ನ ರತೀಶ್ (32), ಮಂಗಳೂರು ಕಾಟಿಪಳ್ಳದ ಶಂಸೀರ್ (34), ಬಂಟ್ವಾಳ ನಿವಾಸಿ ಅಬ್ದುಲ್ ಖಾದರ್ (36) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.  

ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ಕುಂಬಳೆ- ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಿಂದ 2 ಲೋಡ್ ಮರಳು ವಶಪಡಿಸಲಾಗಿದೆ. ಈ ಸಂಬಂಧ ಲಾರಿ ಚಾಲಕರಾದ ಮಳ್ಳಂಗೈ ನಿವಾಸಿ ಅಬೂಬಕರ್ ಬಾಸಿತ್ (28), ವಿಟ್ಲ ಕೊಡಂಗಾಯಿ ನಿವಾಸಿ ಮುಹಮ್ಮದ್ ಆಶಿಫ್ (34) ಎಂಬವರನ್ನು ಬಂಧಿಸಲಾಗಿದೆ.

ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ತಲಪಾಡಿಯಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ಮರಳುಗಳನ್ನು ಹೊಸಂಗಡಿಯಿಂದ ವಶಪಡಿಸಲಾಗಿದೆ. ಲಾರಿ ಚಾಲಕ ಕರ್ನಾಟಕ ಕೆ.ಸಿ. ರೋಡ್‌ನ ಅನ್ಸಾಫ್ (28) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News