ಕುಂಬಳೆಯಲ್ಲಿ ಸರಣಿ ಅಪಘಾತ: ಇಬ್ಬರಿಗೆ ಗಾಯ
Update: 2017-06-09 19:14 IST
ಮಂಜೇಶ್ವರ, ಜೂ. 9: ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಶುಕ್ರವಾರ ಕಾರು, ಬೈಕ್, ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಕುಂಬಳೆ ಆಟೋ ರಿಕ್ಷಾ ಚಾಲಕ ದಂಡೆಗೋಳಿ ನಿವಾಸಿ ರವಿ (38), ಬೈಕ್ ಸವಾರ ಪೆರಡಾಲದ ಅಖಿಲೇಶ್ ರೈ (34) ಎಂಬವರು ಗಾಯಗೊಂಡಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬದಿಯಡ್ಕ ಭಾಗದಿಂದ ಆಗಮಿಸಿದ ಕಾರು ರಸ್ತೆಯ ಬಲಬದಿಗೆ ತಿರುಗಿ ಆಟೋ ರಿಕ್ಷಾ ಹಾಗೂ ಬೈಕ್‌ಗೆ ಢಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಯಿತೆಂದು ದೂರಲಾಗಿದೆ.