“ದಂಗಲ್” ಬಗ್ಗೆ ಚೀನಾ ಅಧ್ಯಕ್ಷ ಪ್ರಧಾನಿ ಮೋದಿಯೊಂದಿಗೆ ಹೇಳಿದ್ದೇನು ಗೊತ್ತೇ?

Update: 2017-06-09 14:18 GMT

ಚೀನಾ, ಜೂ.9: ನಟ ಆಮಿರ್ ಖಾನ್ ಅಭಿನಯದ “ದಂಗಲ್” ಚಿತ್ರ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಉತ್ತಮ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಚೀನಾದಲ್ಲೂ “ದಂಗಲ್” ಬಿಡುಗಡೆಯಾಗಿದ್ದು, 1,100 ಕೋಟಿ ರೂ.ಗಳನ್ನು ಗಳಿಸಿದ್ದು, 7 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಂಗಲ್ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ತಾನೂ ದಂಗಲ್ ವೀಕ್ಷಿಸಿದ್ದು, ತನಗೆ ಆಮಿರ್ ಅಭಿನಯದ ಚಿತ್ರ ಇಷ್ಟವಾಗಿದೆ ಎಂದಿದ್ದಾರೆ.

ಶಾಂಘೈ ಕಾರ್ಪೊರೇಷನ್ ಆರ್ಗನೈಝೇಶನ್ ನ ವಾರ್ಷಿಕ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಪಾಲ್ಗೊಂಡಿದ್ದ ಸಂದರ್ಭ ದಂಗಲ್ ಚಿತ್ರದ ವಿಷಯವೂ ಪ್ರಸ್ತಾಪವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾರೆ. ಈ ಸಂದರ್ಭ ಪ್ರಧಾನಿ ಮೋದಿವರೊಂದಿಗೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ದಂಗಲ್ ಚಿತ್ರ ಚೀನಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆಯೊಂದಿಗೆ ಮುನ್ನುಗ್ಗಿದ್ದು, ತನಗೂ ಚಿತ್ರ ಇಷ್ಟವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News