ಇಫ್ತಾರ್ ಸಂಗಮ ಹಾಗೂ ನಿಶಾ ಕ್ಯಾಂಪ್
Update: 2017-06-09 19:52 IST
ಬಂಟ್ವಾಳ, ಜೂ.9: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್ ಸಮಿತಿಯ ವತಿಯಿಂದ ಬೃಹತ್ ಇಫ್ತಾರ್ ಸಂಗಮ ಹಾಗೂ ನಿಶಾ ಕ್ಯಾಂಪ್ ಜೂ.10ರಂದು ತಾಜುಲ್ ಉಲಮಾ ನಗರ ತಲಕ್ಕಿಯಲ್ಲಿ ನಡೆಯಲಿದೆ.
ವಿ. ಅಬ್ದುಲ್ ರಶೀದ್ ವಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಾಲಿಂ ಸಅದಿ ಮಂಚಿ, ಇಕ್ಬಾಲ್ ಫಾಳಿಲಿ ಬೊಳ್ಮಾರ್ ಸಹಿತ ಅನೇಕ ವಿದ್ವಾಂಸರು, ಧಾರ್ಮಿಕ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.